ಗನ್​ನಿಂದ ಗುಂಡಿಕ್ಕಿ 2 ಡಜನ್​ಗೂ ಹೆಚ್ಚು ಮಂಗಗಳ ಕೊಂದ ಪ್ರಕರಣ; ಆರೋಪಿ ಬಂಧನ| monkeys dead

Monkey Troop
Published on

Uttar pradesh: ಉತ್ತರ ಪ್ರದೇಶದ ಮಥುರಾದಲ್ಲಿ ಪ್ರಾಣಿಗಳ ಮೇಲಿನ ಆಘಾತಕಾರಿ ಕ್ರೌರ್ಯದ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಎರಡು ಡಜನ್‌ಗೂ ಹೆಚ್ಚು ಮಂಗಗಳನ್ನು ಏರ್ ಗನ್ ಬಳಸಿ ಗುಂಡಿಕ್ಕಿ ಕೊಂದಿದ್ದಾನೆ ಎನ್ನಲಾಗಿದೆ. ಇಲ್ಲಿ ಮಂಗಗಳು ಹೆಚ್ಚಾಗಿ ಹನುಮಂತನ ಭಕ್ತಿಯೊಂದಿಗೆ ಸಂಬಂಧ ಹೊಂದಿವೆ. ಈ ನಡುವೆ ಇಂತಹ ಘಟನೆ ನಡೆದಿದ್ದು, ಆ ವ್ಯಕ್ತಿಯ ಈ ಕೃತ್ಯ ಕಂಡ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿ ಹತ್ತಿರದ ಜಾನಕಿ ದಾಸ್ ಆಶ್ರಮದಲ್ಲಿ ವಾಸಿಸುತ್ತಿದ್ದ ವಿದೇಶಿ ಪ್ರಜೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಆ ವ್ಯಕ್ತಿ ಏರ್ ಗನ್ ಬಳಸಿ ಕೋತಿಗಳಿಗೆ ಗುಂಡು ಹಾರಿಸಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಸತ್ತ ಕೋತಿಗಳ ದೇಹಗಳ ಮೇಲೆ ಗುಂಡುಗಳಿಂದಾದ ಗಾಯಗಳು ಕಂಡುಬಂದಿವೆ.

ಅಧಿಕಾರಿಗಳ ಪ್ರಕಾರ, ಗೋವರ್ಧನ ಪೊಲೀಸ್ ಠಾಣೆ ಪ್ರದೇಶದ ಗೋವರ್ಧನ ಗಿರಿರಾಜ್ ಪರ್ವತದ ತಪ್ಪಲಿನಲ್ಲಿರುವ ಗೋವಿಂದ್ ಕುಂಡ್ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಕೋತಿಗಳ ಮೃತದೇಹಗಳನ್ನು ವಶಕ್ಕೆ ತೆಗೆದುಕೊಂಡು, ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

(ಏಜೆನ್ಸೀಸ್)

ಮೃತ ಕೋತಿಗಳ ದೇಹವನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ಕಾರಣ ದೃಢಪಟ್ಟ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತ್ರಿಗುಣ್ ಬಿಸೆನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net