ಋತುಚಕ್ರ ಒಂದು ದಿನ ರಜಾ ಘೋಷಣೆ: ಸರ್ಕಾರಿ ಮಹಿಳಾ ನೌಕರರ ಸಂಘದ ಸ್ವಾಗತ

Siddu DK
Published on

ಬೆಂಗಳೂರು:

ಮಹಿಳಾ ನೌಕರರಿಗೆ ಋತುಚಕ್ರ ಸಂದರ್ಭದಲ್ಲಿ ಒಂದು ದಿನ ರಜೆ ನೀಡುವುದಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದನ್ನು ಅಖಿಲ ಕರ್ನಾಟಕ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿಗೌಡ ಅವರು ಸ್ವಾಗತಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಂಪುಟ ಸಚಿವರು

ಸರ್ಕಾರಿ ಮಹಿಳಾ ನೌಕರರು, ಗಾರ್ಮೆಂಟ್ಸ್ ಮಹಿಳಾ ನೌಕರರು, ಐ.ಟಿ.ಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಇದು ಅನುಕೂಲವಾಗಲಿದೆ. ಇಂಥಹ ತೀರ್ಮಾನ ತೆಗದುಕೊಂಡಿದ್ದಕ್ಕಾಗಿ ಸಿಎಂ, ಡಿಸಿಎಂ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

ಮಹಿಳೆ ಅಬಲೆಯರು ಅಲ್ಲ, ಇಂದು ಸಬಲೆಯರಾಗಿ ಹೊರಹೊಮ್ಮಿದ್ದಾಳೆ. ಕುಟುಂಬದ ಜವಾಬ್ದಾರಿಯ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾಳೆ. ತಂದೆ, ತಾಯಿ ಅತ್ತೆ, ಮಾವ, ಗಂಡ, ಮಕ್ಕಳು ಹೀಗೆ ಕುಟುಂಬದವರ ಎಲ್ಲರ ಯೋಗಕ್ಷೇಮ ನೋಡಿಕೊಂಡು ಬಳಿಕ ತನ್ನ ಕೆಲಸದಲ್ಲಿ ನಿರತಳಾಗುತ್ತಾಳೆ. ದಣಿವರಿಯದ ಕೆಲಸ ಮಹಿಳೆಯರಿಗೆ ಇದು ಅಗತ್ಯವಾಗಿತ್ತು ಎಂದು ಹೇಳಿದ್ದಾರೆ.

ಪ್ರತಿ ತಿಂಗಳ ಋತುಚಕ್ರ ಸಂದರ್ಭದಲ್ಲಿ ಮಾನಸಿಕ, ದೃಹಿಕವಾಗಿ ಯಾತೆನೆ ಅನುಭವಿಸುವುದನ್ನು ಅರಿತು, ರಾಜ್ಯ ಸಚಿವ ಸಂಪುಟದಲ್ಲಿ ಋತುಚಕ್ರದ ಸಂದರ್ಭದಲ್ಲಿ ವೇತನಸಹಿತ ಒಂದು ದಿನದ ರಜಾ ನೀಡಬೇಕು ಎಂದು ತೀರ್ಮಾನಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ ಎಂದು ರೋಶನಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net