

ಅಮೆರಿಕ: ಇಂದಿನ ದಿನಗಳಲ್ಲಿ ಪ್ರಾಣಿಗಳು- ಪಕ್ಷಿಗಳು ಮಾನವರಂತೆಯೇ ವರ್ತಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಸದ್ಯ ಟೆಕ್ಸಾಸ್‌ನ ಜನನಿಬಿಡ ಸ್ಪಿರಿಟ್ ಹ್ಯಾಲೋವೀನ್ ಅಂಗಡಿಯೊಳಗೆ ಸಾಕು ಮಂಗವೊಂದು (Monkey) ಡೈಪರ್ ಧರಿಸಿ ಓಡಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಡೈಪರ್ ಧರಿಸಿದ ಮಂಗವು ಸುಮಾರು ಅರ್ಧಗಂಟೆಗಳ ಕಾಲ ಹಗ್ಗದಿಂದ ತೂಗಾಡುತ್ತಿದೆ. ಇದು ಅಂಗಡಿಯಲ್ಲಿರುವ ಹೆಣ್ಣು ಮಕ್ಕಳು ತೋರಿಸಿದ ಭಯಾನಕ ವಸ್ತುವನ್ನು ನೋಡಿದ ನಂತರ ಕೋತಿ ತನ್ನ ಪ್ಯಾಂಟ್‌ನ ಸೀಟಿನಿಂದ ಕೆಳಗೆ ಇಳಿದಿದೆ. ಇದನ್ನು ನೋಡಿದ ಗ್ರಾಹಕರು ಗಾಬರಿಗೊಂಡಿದ್ದಾರೆ. ನಂತರ ಕೋತಿಯು ಕಪಾಟಿನಲ್ಲಿ ಓಡಲು, ಕಂಬಗಳನ್ನು ಹತ್ತಲು ಮತ್ತು ಸೀಲಿಂಗ್‌ನಿಂದ ತೂಗಾಡಲು ಪ್ರಾರಂಭಿಸಿರುವುದನ್ನು ಈ ವಿಡಿಯೋ ಸೆರೆಹಿಡಿಯಲಾಗಿದೆ.
ಅಂಗಡಿಗೆ ಬಂದಂತಹ ಸಿಬ್ಬಂದಿ ಕರೆ ಮಾಡಿದ ನಂತರ, ಪ್ಲಾನೋ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಡೈಪರ್ ಧರಿಸಿ ತೂಗಾಡುತ್ತಿದ್ದ ಕೋತಿಯನ್ನು 30 ನಿಮಿಷಗಳಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ಪ್ರಾಣಿಗೆ ಯಾವುದೇ ರೀತಿಯಲ್ಲೂ ತೊಂದರೆ ಉಂಟಾಗಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.
ವೈರಲ್ ಆದ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಸಾಮಾಜಿಕ ಮಾದ್ಯಮ ಬಳಕೆದಾರರೊಬ್ಬರು ಸ್ಪಿರಿಟ್ ಹ್ಯಾಲೋವೀನ್ ಅಂಗಡಿಯಲ್ಲಿ ಕೋತಿ ಏಕೆ ಇತ್ತು? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಟೆಕ್ಸಾಸ್‌ನಲ್ಲಿ ಕೋತಿಗಳನ್ನು ಅಂಗಡಿಗಳಿಗೆ ತೆಗೆದುಕೊಂಡು ಹೋಗಬಹುದು ಎಂದು ತಿಳಿದಿರಲಿಲ್ಲ. ಇದು ನಿಜಕ್ಕೂ ಆಶ್ಚರ್ಯ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)