ಕ್ರೌರ್ಯಕ್ಕೆ ಎಲ್ಲೆ ಎಲ್ಲಿ? ಈ ಮಂಗನ ಸ್ಥಿತಿ ನೋಡಿ ಪಾಪ! ವಿಡಿಯೋ ವೈರಲ್‌

monkey
Published on

ತೆಲಂಗಾಣ: ಜನರು ಇರುವಲ್ಲಿಗೆ ಮಂಗಗಳು ಬರುತ್ತಿವೆ ಎನ್ನುವ ಕಾರಣಕ್ಕೆ ತೆಲಂಗಾಣದ ಖಮ್ಮಂ ಜಿಲ್ಲೆಯ ಅಮ್ಮಪಲೆಂ ಗ್ರಾಮದಲ್ಲಿ ಒಂದಿಷ್ಟು ಮಂದಿ ಮಂಗವೊಂದಕ್ಕೆ ಉರುಳು ಹಾಕಿರುವ ಅಮಾನವೀಯ ಘಟನೆ ನಡೆದಿದೆ.

ಸಾಲದು ಎಂಬುದಕ್ಕೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವೈರಲ್‌ ಆಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ ಸಂದರ್ಭದಲ್ಲಿ ಅವರು, ಉಳಿದ ಮಂಗಗಳಿಗೆ ಇದು ಪಾಠವಾಗುತ್ತದೆ ಎನ್ನುವ ಕಾರಣಕ್ಕೆ ತಾವು ಈ ರೀತಿ ಮಾಡಿರುವುದಾಗಿ ಹೇಳಿದ್ದಾರೆ. ಈ ಭಾಗದಲ್ಲಿ ಮಂಗನ ಕಾಟ ವಿಪರೀತ ಆಗಿರುವ ಕಾರಣ ಹೀಗೆ ಪಾಠ ಕಲಿಸಲು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ನೀರಿನ ಟ್ಯಾಂಕ್‌ ಒಂದರ ಬಳಿ ಇದ್ದ ಮಂಗವೊಂದನ್ನು ಬುಡಮೇಲಾಗಿ ಕಟ್ಟಿ ಅದಕ್ಕೆ ಉರುಳು ಹಾಕಲಾಗಿದೆ. ಮಂಗ ನೋವಿನಿಂದ ಒದ್ದಾಡುತ್ತಿದ್ದಾಗ ಜನರು ಖುಷಿಯಿಂದ ಕುಣಿದಾಡಿದ್ದಾರೆ. ಮಂಗಕ್ಕೆ ಆಗಿರುವ ಹಿಂಸೆಯನ್ನು ನೋಡಲಾಗದೆ ಎನ್ನುವಂತೆ ನಾಯಿಗಳು ಬೊಗಳುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ವ್ಯಕ್ತಿಗಳನ್ನು ಬಂಧಿಸಲಾಗಿದೆ.

v

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net