

ಜುರಾಸಿಕ್ ಪಾರ್ಕ್ನಲ್ಲಿ ಕಂಡ ಪ್ರಾಣಿಯೊಂದು ದಿಢೀರ್ ಮನೆ ಸಮೀಪ ಕಂಡರೆ ಅಚ್ಚರಿ ಆಗದೇ ಇರುವುದೇ? ಅಂಥದ್ದೊಂದು ವಿದ್ಯಮಾನ ರಾಷ್ಟ್ರರಾಜಧಾನಿಯಲ್ಲಿ ನಡೆದಿದೆ. ಭಾರಿ ಗಾತ್ರದ ಸರೀಸೃಪವೊಂದು ಮನೆಯ ಗೋಡೆಯ ಹಿಂದೆ ಕಾಣಿಸಿಕೊಂಡ ಚಿತ್ರವನ್ನು ಐಪಿಎಸ್ ಅಧಿಕಾರಿ ಎಚ್ಜಿಎಸ್ ಧಲಿವಾಲ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆ ಚಿತ್ರಕ್ಕೆ ಅವರು ನೀಡಿದ ಶೀರ್ಷಿಕೆ ಇಷ್ಟೆ- ದೆಹಲಿಯಲ್ಲಿ ಯಾರದೋ ಮನೆಯ ಆವರಣದಲ್ಲಿ ಕಾಣಸಿಕೊಂಡದ್ದು ಇದು!!
ಧಲಿವಾಲ್ ಅವರ ಈ ಪೋಸ್ಟ್ಗೆ 600ಕ್ಕೂ ಹೆಚ್ಚು ಜನ ಪ್ರತಿಕ್ರಿಯೆ ನೀಡಿದ್ದು, ಕೆಲವರು ಮಾನಿಟರ್ ಲಿಝಾರ್ಡ್ ಅಂದರೆ, ಇನ್ನು ಕೆಲವರು ಕೊಮೊಡೊ ಡ್ರ್ಯಾಗನ್ ಎಂದಿದ್ದಾರೆ. 5 ಸಾವಿರಕ್ಕೂ ಹೆಚ್ಚು ಜನ ಪೋಸ್ಟ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಕೊಮೊಡೊ ಡ್ರ್ಯಾಗನ್ ಅಥವಾ ಬೃಹತ್ ಗಾತ್ರದ ಹಲ್ಲಿ ಏಷ್ಯಾದ ರಾಷ್ಟ್ರಗಳಲ್ಲಿ ಸರ್ವೇಸಾಮಾನ್ಯ. ಆದರೆ ಅವುಗಳು ಮನುಷ್ಯವಾಸ ಇರುವಲ್ಲಿ ಕಾಣಿಸಕೊಳ್ಳುವುದು ಬಹು ವಿರಳ. ಓಡಿ ಹೋಗುತ್ತವೆ. ಸಣ್ಣ ಸಣ್ಣ ಪ್ರಾಣಿಗಳನ್ನು ಸೇವಿಸುವ ಇವುಗಳು ಕಚ್ಚಿದರೆ ಮನುಷ್ಯರಲ್ಲಿ ಬ್ಯಾಕ್ಟೀರಿಯಾ ಸೋಂಕು ಉಂಟಾಗುತ್ತದೆ ಎಂಬ ಉಲ್ಲೇಖವಿದೆ. (ಏಜೆನ್ಸೀಸ್)