ಜಾನುವಾರುಗಳ ಆರೋಗ್ಯಕ್ಕೆ ನಿಗಾ ವಹಿಸಿ

 ಬಿಳಗುಂದ ಗ್ರಾಮದಲ್ಲಿ ಪಶುಪಾಲನ ಇಲಾಖೆ ವತಿಯಿಂದ ಆಯೋಜಿಸಿದ ಜಾನುವಾರು ಅರೋಗ್ಯ ಶಿಬಿರದಲ್ಲಿ ಗ್ರಾಮದ ಜಾನುವಾರುಗಳ ಆರೋಗ್ಯವನ್ನು ಪರೀಕ್ಷೆ ಮಾಡಲಾಯಿತು. ಡಾ.ಸೋಮಯ್ಯ, ಡಾ.ಚಾಮರಾಜ, ಡಾ.ಹರ್ಷಿತಾ, ಚೇತನ್, ಸಮಿಉಲ್ಲ ಇದ್ದರು.
ಬಿಳಗುಂದ ಗ್ರಾಮದಲ್ಲಿ ಪಶುಪಾಲನ ಇಲಾಖೆ ವತಿಯಿಂದ ಆಯೋಜಿಸಿದ ಜಾನುವಾರು ಅರೋಗ್ಯ ಶಿಬಿರದಲ್ಲಿ ಗ್ರಾಮದ ಜಾನುವಾರುಗಳ ಆರೋಗ್ಯವನ್ನು ಪರೀಕ್ಷೆ ಮಾಡಲಾಯಿತು. ಡಾ.ಸೋಮಯ್ಯ, ಡಾ.ಚಾಮರಾಜ, ಡಾ.ಹರ್ಷಿತಾ, ಚೇತನ್, ಸಮಿಉಲ್ಲ ಇದ್ದರು.
Published on

ಬೆಟ್ಟದಪುರ: ಜಾನುವಾರುಗಳಿಗೆ ತಗುಲಬಹುದಾದ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬಿಳಗುಂದ ಗ್ರಾಮದಲ್ಲಿ ಪಶುಪಾಲನ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಜಾನುವಾರು ಅರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ಸಿಗುತ್ತಿದೆ. ಹಾಲು ಉತ್ಪಾದನೆ, ಬರಡು ರಾಸುವಿಗೆ ಚಿಕಿತ್ಸೆ ಸೇರಿದಂತೆ ಜಾನುವಾರುಗಳ ಆರೈಕೆ ಬಗ್ಗೆ ರೈತರು ನಿರ್ಲಕ್ಷ್ಯ ತೋರಬಾರದು. ಹತ್ತಿರದ ಪಶು ಆಸ್ಪತ್ರೆಯಲ್ಲಿ ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು. ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗಾಗಿ ಏರ್ಪಡಿಸುವ ಪಶು ಆರೋಗ್ಯ ತಪಾಸಣಾ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಶಿಬಿರದಲ್ಲಿ ಬರಡು ರಾಸುಗಳಿಗೆ ಚಿಕಿತ್ಸೆ, ಜಂತುನಾಶಕ ಔಷಧ ವಿತರಣೆ ಹಾಗೂ ಆಡು, ಕುರಿಗಳಿಗೆ ಇಟಿ ಲಸಿಕೆ ಹಾಕಲಾಯಿತು. ಪಶು ವೈದ್ಯಾಧಿಕಾರಿಗಳಾದ ಡಾ.ಚಾಮರಾಜ, ಡಾ.ಹರ್ಷಿತಾ, ಕಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಚೇತನ್, ಸಮೀಉಲ್ಲ, ಸಿಬ್ಬಂದಿ ಜಗದೀಶ, ಗೌರಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net