ಮನುಷ್ಯನಂತೆ ವೇಗವಾಗಿ ಓಡಿದ ಮಂಗ! ಕಾರಣ ತಿಳಿದ್ರೆ ಮನಕಲಕುತ್ತೆ | Viral Video

ವಿಜಯವಾಣಿ - 2024-12-10T153122.901
Published on

ನವದೆಹಲಿ: ಕಾಡು ಪ್ರಾಣಿಗಳನ್ನು ದೂರದಿಂದ ನೋಡಿ, ಖುಷಿ ಪಡುವುದು ಬುದ್ಧಿವಂತರ ಲಕ್ಷಣ. ಕೆಲವರು ಇದನ್ನು ಮರೆತು, ಅವುಗಳ ಸಂಪರ್ಕ ಮಾಡಲು ಹುಚ್ಚಾಟ ಪ್ರದರ್ಶಿಸುತ್ತಾರೆ. ಇದರಿಂದ ಕೆಲವೊಮ್ಮೆ ಪ್ರಾಣಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಸದ್ಯ ನೇರಾ ನೇರಕ್ಕಿಂತ ಜಾಲತಾಣಗಳಲ್ಲಿ ಪ್ರಾಣಿಗಳ ಸಂಘರ್ಷ ಅಥವಾ ಆನಂದ ತರುವ ವಿಡಿಯೋಗಳನ್ನು (Viral Video) ಕಣ್ತುಂಬಿಕೊಳ್ಳುವ ನೆಟ್ಟಿಗರು, ಇಲ್ಲೊಂದು ವೈರಲ್ ದೃಶ್ಯ ಕಂಡು ಅಚ್ಚರಿಗೆ ಒಳಗಾಗಿದ್ದಾರೆ.

ತನ್ನ ಎರಡು ಕೈಗಳನ್ನು ಕಳೆದುಕೊಂಡ ಕೋತಿಯೊಂದು ಮನುಷ್ಯರು ನಡೆದು ಬರುತ್ತಿದ್ದ ಹಾದಿಯಲ್ಲಿ ಆಹಾರ ಅರಸಿಕೊಂಡು ಬಂದಿದೆ. ಈ ವೇಳೆ ದಿಢೀರ್​ ಎಂದು ಓಡಲು ಪ್ರಾರಂಭಿಸಿದ ಮಂಗ, ಥೇಟ್​ ಮಾನವನಂತೆ ಎರಡು ಕಾಲಿನಲ್ಲಿ ಓಡಿದೆ. ಈ ದೃಶ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಇದು ವಿದೇಶದಲ್ಲಿರುವ ನ್ಯಾಚುರಲ್ ಲೈಫ್ ಪಾರ್ಕ್‌ನಲ್ಲಿ ಸೆರೆಹಿಡಿಯಲಾದ ವಿಡಿಯೋ ಎಂದು ವರದಿಯಾಗಿದೆ.

19 ಸೆಕೆಂಡ್ ದೃಶ್ಯದಲ್ಲಿ ಮಾನವನಂತೆ ಎರಡು ಕಾಲುಗಳಿಂದಲೇ ಮೆಟ್ಟಿಲು ಹತ್ತಿಕೊಂಡು ಓಡಿರುವುದು ನೋಡುಗರ ಮನಗೆದ್ದಿದೆ. ಆರಂಭದಲ್ಲಿ ಕೋತಿಯ ಓಡಾಟ ಕೆಲವರಿಗೆ ನಗು ತರಿಸಿದರು, ಅಂತಿಮವಾಗಿ ಅದರ ಪರಿಸ್ಥಿತಿ ಎಂಥವರ ಮನಕಲಕುತ್ತೆ. ಎರಡು ಕೈಗಳನ್ನು ಕಳೆದುಕೊಂಡಿದ್ದರೂ ಸಹ ಎರಡು ಕಾಲುಗಳ ಮೇಲೆ ಅವಲಂಬಿತವಾಗಿರುವ ಮಂಗನ ಬುದ್ಧಿವಂತಿಕೆ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net