ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಚಿವ ಐ ಪೆರಿಯಾಸಾಮಿ ಮನೆ ಮೇಲೆ ED ದಾಳಿ, ಶೋಧ| ED Raid

I Periyasamy
Published on

ED Raid: ತಮಿಳುನಾಡಿನ ಡಿಎಂಕೆ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವ ಐ. ಪೆರಿಯಾಸಾಮಿ ಮತ್ತು ಅವರ ಪುತ್ರ ಶಾಸಕ ಐ.ಪಿ.ಸೆಂಥಿಲ್​ಕುಮಾರ್, ಪುತ್ರಿ ಇಂದ್ರಾಣಿ ಅವರಿಗೆ ಸಂಬಂಧಿಸಿದ ದಿಂಡಿಗಲ್​ನ ಹಲವು ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಬೆಳಗ್ಗೆ(ಆಗಸ್ಟ್ 16) ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ನಗರದ ಇಡಿ ಅಧಿಕಾರಿಗಳು ದಿಂಡಿಗಲ್​ನ ದುರೈರಾಜ ನಗರದ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಇತರ ಎರಡು ತಂಡಗಳು ಸೀಲಪಾಡಿಯಲ್ಲಿರುವ ಪುತ್ರ ಮತ್ತು ಪಳನಿ ಶಾಸಕ ಐಪಿ ಸೆಂಥಿಲ್ ಕುಮಾರ್ ಅವರ ಮನೆ, ದಿಂಡಿಗಲ್‌ನ ವಲ್ಲಲಾರ್ ನಗರದಲ್ಲಿರುವ ಪುತ್ರಿ ಇಂದ್ರಾಣಿ ಅವರ ಮನೆಯ ಮೇಲೂ ದಾಳಿ ನಡೆಸಿದ್ದು, ದಾಖಲೆ ಪರಿಶೀಲಿಸುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಐ. ಪೆರಿಯಸಾಮಿ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ (ಡಿಎ) ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಏಪ್ರಿಲ್ 29, 2025 ರಂದು ವಿಚಾರಣೆಗೆ ಆದೇಶಿಸಿದೆ. ಈ ಹಿನ್ನೆಲೆ ಅಧಿಕಾರಿಗಳು ನಡೆಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net