Keerthy Suresh marriage: ‘ಅಮ್ಮ ಡೈರಿ ಓದಿದ್ರು, ಮನೆಯಲ್ಲಿ ಗಲಾಟೆಯಾಗಿತ್ತು’! ಅಂತರಧರ್ಮೀಯ ಮದುವೆ ಕಥೆ ಬಿಚ್ಚಿಟ್ಟ ಕೀರ್ತಿ ಸುರೇಶ್

Keerthy Suresh's interfaith marriage
ನಟಿ ಕೀರ್ತಿ ಸುರೇಶ್ ಮತ್ತು ಪತಿ ಆಂಟೋನಿ ತಟ್ಟಿಲ್ ಮದುವೆಯ ಫೋಟೋ.
Published on: 

Keerthy Suresh love stor: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್, ತಮ್ಮ ಬಹುಕಾಲದ ಗೆಳೆಯ ಹಾಗೂ ಉದ್ಯಮಿ ಆಂಟೋನಿ ತಟ್ಟಿಲ್ ಜತೆಗಿನ ಮದುವೆ ಹಾಗೂ ಅದಕ್ಕೂ ಮುನ್ನ ಎದುರಾದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದರಿಂದ, ಆರಂಭದಲ್ಲಿ ಮನೆಯವರನ್ನು ಒಪ್ಪಿಸುವುದು ದೊಡ್ಡ ಸವಾಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಕೀರ್ತಿ ಸುರೇಶ್ ಹಿಂದೂ, ಆಂಟೋನಿ ಕ್ರಿಶ್ಚಿಯನ್. 2010 ರಲ್ಲಿ ಶುರುವಾದ ಇವರ ಪ್ರೇಮಕಥೆ 2024 ರಲ್ಲಿ ಮದುವೆಯಾಗಿ ಪೂರ್ಣಗೊಂಡಿತು. ‘ನಾವಿಬ್ಬರೂ ಡಿಸೆಂಬರ್ 2009 ರಲ್ಲಿ ಸಿಕ್ಕಿದ್ವಿ, 2010 ರ ಜನವರಿಯಿಂದ ಡೇಟಿಂಗ್ ಶುರುಮಾಡಿದ್ವಿ. ಆಂಟೋನಿ ಬೇರೆ ಧರ್ಮದವನಾದ್ದರಿಂದ ಮನೆಯಲ್ಲಿ ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಕುಟುಂಬದವರನ್ನು ಮನವೊಲಿಸಲು ನನಗೆ ಬಹಳ ಸಮಯ ಬಿತ್ತು" ಎಂದು ಕೀರ್ತಿ ತಿಳಿಸಿದ್ದಾರೆ.

ಕಾಲೇಜು ದಿನಗಳಲ್ಲೇ ಹುಟ್ಟಿತ್ತು ಪ್ರೀತಿ

ಕಾಲೇಜು ದಿನಗಳಲ್ಲೇ ಅಮ್ಮನಿಗೆ ಪ್ರೀತಿಯ ವಿಷಯ ಸಿಕ್ಕಿಬಿದ್ದಿದ್ದ ಘಟನೆಯನ್ನು ಕೀರ್ತಿ ನೆನಪಿಸಿಕೊಂಡಿದ್ದಾರೆ. 12ನೇ ತರಗತಿ ಮುಗಿಯುತ್ತಿದ್ದಂತೆ ಆಂಟೋನಿ ಜೊತೆ ಪ್ರೀತಿ ಶುರುವಾಗಿತ್ತು. ಕಾಲೇಜಿನಲ್ಲಿದ್ದಾಗ ಕೀರ್ತಿ ಬರೆಯುತ್ತಿದ್ದ ವೈಯಕ್ತಿಕ ಡೈರಿಯನ್ನು ಅಮ್ಮ ಓದಿ ವಿಷಯ ತಿಳಿದುಕೊಂಡಿದ್ದರು. ಈ ಘಟನೆಯಿಂದ ಬೇಸತ್ತು ಕೀರ್ತಿ ಆಮೇಲೆ ಡೈರಿ ಬರೆಯುವುದನ್ನೇ ಸಂಪೂರ್ಣವಾಗಿ ಬಿಟ್ಟುಬಿಟ್ಟರಂತೆ.

ಇದನ್ನೂ ಓದಿ: ದೀಪಾವಳಿಯಂದೇ ದಿವಾಳಿ ಮಾಡಿದ್ದೀರಿ..'ದುಬಾರಿ' ಬಂಪರ್ ಗಿಫ್ಟ್​ಗೆ ಥ್ಯಾಂಕ್ಯೂ; ಹಾಲು, ಬಸ್ ಟಿಕೆಟ್ ದರ ಏರಿಸಿದ ಸರ್ಕಾರಕ್ಕೆ ಸಖತ್ ಕ್ಲಾಸ್..Bus Fare Hikes

15 ವರ್ಷಗಳ ಸುದೀರ್ಘ ಬೆಸುಗೆ

ಬಹಳ ವರ್ಷಗಳ ಕಾಲ ತಮ್ಮ ಪ್ರೇಮಕಥೆಯನ್ನು ಗಾಸಿಪ್‌ಗಳಿಂದ ದೂರವಿಟ್ಟಿದ್ದ ಈ ಜೋಡಿ, ನವೆಂಬರ್ 2024 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಹಂಚಿಕೊಂಡಿತ್ತು. 15 ವರ್ಷಗಳ ಸುದೀರ್ಘ ಪ್ರೀತಿಯ ನಂತರ, ಡಿಸೆಂಬರ್ 12, 2024 ರಂದು ಗೋವಾದಲ್ಲಿ ತಮಿಳು ಹಿಂದೂ ಹಾಗೂ ಮಲಯಾಳಿ ಕ್ರಿಶ್ಚಿಯನ್ ಸಂಪ್ರದಾಯಗಳೆರಡರ ಪ್ರಕಾರ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು.