ಮೊಹರಂ ಆಚರಣೆ ಹಿನ್ನೆಲೆ ಜಾನ್ಸನ್ ಮಾರ್ಕೆಟ್ ರಸ್ತೆ ಬಂದ್

traffic
Published on

ಬೆಂಗಳೂರು: ಮುಸ್ಲಿಂಮರ ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಜಾನ್ಸನ್ ಮಾರ್ಕೆಟ್‌ನಿಂದ ಎಲ್ಜಿನ್ ಅಪಾರ್ಟ್‌ಮೆಂಟ್‌ವರೆಗೆ ಬುಧವಾರ ಮಧ್ಯಾಹ್ನ 1ರಿಂದ ಸಂಜೆ 5.30ರವರೆಗೆ ಸಂಚಾರ ಮಾರ್ಗವನ್ನು ಟ್ರಾಫಿಕ್ ಪೊಲೀಸರು ಬದಲಾಯಿಸಿದ್ದಾರೆ.

ಬ್ರಿಗೇಡ್ ರಸ್ತೆ ಮೂಲಕ ಹೊಸೂರು ರಸ್ತೆ ಕಡೆಗೆ ವೆಲ್ಲಾರಾ ಜಂಕ್ಷನ್ (ಶೂಲೆ ವೃತ್ತ) ಮುಖಾಂತರ ತೆರಳುವ ಸವಾರರು ರಿಚ್ಮಂಡ್ ರಸ್ತೆ ಮೂಲಕ ರೀನಿಯಸ್ ಕ್ರಾಸ್, ನಂಜಪ್ಪ ವೃತ್ತ ಲಾಂಗ್ ರಸ್ತೆ, ಸಿಎಂಪಿ ಜಂಕ್ಷನ್ ಮೂಲಕ ಸಂಚರಿಸಬಹುದು.

ಹೊಸೂರು ರಸ್ತೆ ಆಡುಗೋಡಿ ಕಡೆಯಿಂದ ಬರುವ ವಾಹನಗಳು ಸಿಮೆಂಟ್ರಿ ಕ್ರಾಸ್, ಬರ್ಲಿ ಸ್ಟ್ರೀಟ್, ಲಾಂಗ್‌ೆರ್ಡ್ ರಸ್ತೆ, ನಂಜಪ್ಪ ವೃತ್ತ, ರೀನಿಯಸ್ ಸ್ಟ್ರೀಟ್ ಮೂಲಕ ರಿಚ್ಮಂಡ್ ರಸ್ತೆಗೆ ಬಂದು ಮುಂದಕ್ಕೆ ಸಾಗಲು ಅವಕಾಶ ಕಲ್ಪಿಸಲಾಗಿದೆ.

ಅದೇ ರೀತಿ ಹೊಸೂರು ರಸ್ತೆ ಕಡೆಯಿಂದ ಬರುವ ಭಾರಿ ವಾಹನ ಸವಾರರು ಆಡುಗೋಡಿಯ ಮೈಕೋ ಜಂಕ್ಷನ್‌ನಿಂದ 8ನೇ ಮೈನ್‌ಗೆ ಬಂದು ವಿಲ್ಸನ್ ಗಾರ್ಡನ್ ಮುಖ್ಯರಸ್ತೆಯಿಂದ ಸಿದ್ದಯ್ಯ ರಸ್ತೆಗೆ ಬಂದು ಸಾಗಲು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net