ಸಹೋದರಿಯರನ್ನೇ ಗುಂಡಿಟ್ಟು ಕೊಂದ ಕಾಂಗ್ರೆಸ್​ ಮುಖಂಡನ ಮಗ!

murder
Published on

ಚಂಡಿಗರ್: ಒಡಹುಟ್ಟಿದ ಸಹೋದರಿಯರನ್ನೇ ಯುವಕನೊಬ್ಬ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಪಂಜಾಬ್​ನ ಮೋಗಾ ಜಿಲ್ಲೆಯ ಮಾನುಕೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.

ಕುನ್ವಾಲ್ ಪ್ರೀತ್ ಕೌರ್ (18) ಹಾಗೂ ಅಮನಪ್ರೀತ್ ಕೌರ್ (24) ಗುಂಡೇಟಿಗೆ ಬಲಿಯಾದ ಸಹೋದರಿಯರು. ಶೇಕ್ ಕುರ್ದ್​ ಹಳ್ಳಿಯ ಕಾಂಗ್ರೆಸ್ ಮುಖಂಡ ಹಾಗೂ ಸರಪಂಚ್ ಸುಖವಿಂದರ್​ ಕೌರ್​ನ ಮಗ ಗುರುವೀರ್ ಸಿಂಗ್​ನೇ ತನ್ನ ಸಹೋದರಿಯರಿಯರನ್ನು ಗುಂಡಿಟ್ಟು ಕೊಂದವ. ಸದ್ಯ ಗುರುವೀರ್​ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದು, ಈ ಘಟನೆ ಪಂಜಾಬ್​ ನ್ನು ಬೆಚ್ಚಿ ಬಿಳ್ಳಿಸಿದೆ.

ಮಾನುಕೆ ಎಂಬ ಹಳ್ಳಿಯಲ್ಲಿ ಕಾರ್​ನಲ್ಲಿ ಹೋಗುತ್ತಿದ್ದಾಗ ಗುರುವೀರ್ ಸಿಂಗ್ ತನ್ನ ಸಹೋದರಿಯರನ್ನು ಹೊರಗೆಳೆದು ಗುಂಡೇಟು ನೀಡಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಇಬ್ಬರೂ ಯುವತಿಯರು ಹಳ್ಳಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಯುವತಿಯರು ಯುವಕನೊಬ್ಬನೊಂದಿಗೆ ಸಲುಗೆಯಿಂದ ಇದ್ದಿದ್ದಕ್ಕೆ ಗುರುವೀರ್​ ಸಿಂಗ್ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಇನ್ನು ಈ ಘಟನೆ ಬಗ್ಗೆ ಆಘಾಥ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಕೂಡಲೇ ತ್ವರಿತ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆದೇಶ ಮಾಡಿದ್ದಾರೆ. (ಏಜೇನ್ಸಿಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net