

ನವದೆಹಲಿ: ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧಿವೇಶನದ ಉನ್ನತ ಮಟ್ಟದ ವಿಭಾಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ 8.20ಕ್ಕೆ ಭಾಷಣ ಮಾಡಲಿದ್ದಾರೆ.
ಪ್ರತಿವರ್ಷ ಉನ್ನತ ಮಟ್ಟದ ವಿಭಾಗದಿಂದ ಸರ್ಕಾರ, ಖಾಸಗಿ ವಲಯ, ನಾಗರಿಕ ಸಮಾಜ ಮತ್ತು ಅನೇಕ ಪ್ರತಿನಿಧಿಗಳ ಸಭೆಯನ್ನು ನಡೆಸಲಾಗುತ್ತದೆ. ಈ ವರ್ಷ ‘ಕೋವಿಡ್-19 ನಂತರದ ಬಹುಪಕ್ಷೀಯತೆ: 75ನೇ ವಾರ್ಷಿಕೋತ್ಸವದಲ್ಲಿ ನಮಗೆ ಯಾವ ರೀತಿಯ ವಿಶ್ವಸಂಸ್ಥೆ ಬೇಕು?’ ಎನ್ನುವ ವಿಷಯವನ್ನಿಟ್ಟುಕೊಂಡು ಸಭೆ ನಡೆಸಲಾಗುತ್ತಿದೆ.