ಯಾದಗಿರಿಗೆ ಪ್ರಧಾನಿ ಪಯಣ; ಕಲಬುರಗಿಯಿಂದ ಹೊರಟ ಮೋದಿ

modi1
Published on

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ನರೇಂದ್ರ ಮೋದಿ ಹತತು ನಿಮಿಷ ಮುಂಚಿತವಾಗಿಯೇ ಆಗಮಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ ಕುಮಾರ್ ಕಟೀಲ್ ಮುಂತಾದ ರಾಜ್ಯ ಬಿಜೆಪಿ ನಾಯಕರು ಸ್ವಾಗತ ಕೋರಿದ್ದಾರೆ.

ಸದ್ಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ತೆರಳಿರುವ ಪ್ರಧಾನಿ ಮೋದಿಗೆ ಕಲಬುರಗಿ ಏರ್‌ಪೋರ್ಟ್‌ನಿಂದ IAF MI-17 ವಿಶೇಷ ಹೆಲಿಕ್ಯಾಪ್ಟರ್‌ನಲ್ಲಿ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾಲಿಗೆ ಹಿಂಬದಿಯಲ್ಲಿ ಮೂರು ಹೆಲಿಕಾಪ್ಟರ್‌ಗಳು ಭದ್ರತೆ ಕೂಡ ನೀಡುತ್ತವೆ.

ಪ್ರಧಾನಿ ಜೊತೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರಯಾಣ ಬೆಳೆಸುತ್ತಿದ್ದು ಯಾದಗಿರಿಯ ಕೊಡೆಕಲ್​ ಹೆಲಿಪ್ಯಾಡ್​ನಲ್ಲಿ ಲ್ಯಾಂಡ್​ ಆಗಲಿದ್ದಾರೆ.

ಕೊಡೆಕಲ್ ಹೆಲಿಪ್ಯಾಡ್​ನಿಂದ ಕಾರ್ಯಕ್ರಮ ಸ್ಥಳಕ್ಕೆ ರಸ್ತೆ ಮೂಲಕ ಪ್ರಯಾಣ ಬೆಳೆಸಲಿರುವ ಪ್ರಧಾನಿ 12 ಗಂಟೆಗೆ ವಿವಿಧ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ ಕಾರ್ಯಕ್ರಮ ಮುಗಿಸಿ 1:05 ನಿಮಿಷಕ್ಕೆ ಕಾರ್ಯಕ್ರಮ ಸ್ಥಳದಿಂದ ಕೊಡೆಕಲ್ ಹೆಲಿಪ್ಯಾಡ್ ಸ್ಥಳಕ್ಕೆ ರಸ್ತೆ ಮೂಲಕ ಹಿಂತಿರುಗಲಿದ್ದಾರೆ. 1:10ಕ್ಕೆ ಕೊಡೆಕಲ್ ಹೆಲಿಪ್ಯಾಡ್​ನಿಂದ ಮಳಖೇಡನತ್ತ ಪ್ರಯಾಣ ಬೆಳೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net