ವಿಶ್ವದ ಜನಪ್ರಿಯ ನಾಯಕರಲ್ಲಿ ಮೋದಿಯೇ ಅಗ್ರಗಣ್ಯ

Modi
Published on

ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ 2022ರ ಜನವರಿ13ರಿಂದ 19ರವರೆಗೆ ನಡೆಸಿದ ವಿಶ್ವದ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಯೂ ಆಗ್ರಗಣ್ಯರಾಗಿದ್ದಾರೆ. ಆದರೆ 2020ರ ಮೇನಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ. 83ರಷ್ಟಿದ್ದ ಅವರ ರೇಟಿಂಗ್. 2021ರ ಮೇನಲ್ಲಿ ಶೇ. 63ಕ್ಕೆ ಇಳಿದಿತ್ತು. ಈ ಸಾರಿ ಶೇ. 71ರಷ್ಟಿದೆ.

  • ಅಮೆರಿಕ, ಕೆನಡಾ, ಆಸ್ಟ್ರೇಲಿಯಾದ ನಾಯಕರು ಇರುವ ಪಟ್ಟಿಯಲ್ಲಿ 13 ಜನರನ್ನು ಗುರುತಿಸಲಾಗಿದೆ.
  • ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶೇ. 26 ರೇಟಿಂಗ್ ಪಡೆದು 13ನೇ ಸ್ಥಾನದಲ್ಲಿದ್ದಾರೆ.
  • ಈ ಸರ್ವೆಗೆ ಒಪ್ಪಿಕೊಂಡ ದೇಶಗಳಲ್ಲಿ ಮೂರರಿಂದ 5 ಸಾವಿರ ಜನರ ಪ್ರತಿಕ್ರಿಯೆ ದಾಖಲಿಸಲಾಗಿದೆ. ಆದರೆ, ಅಮೆರಿಕದಲ್ಲಿ 45 ಸಾವಿರ ಜನರು ಸಮೀಕ್ಷೆಗೆ ಒಳಪಟ್ಟಿದ್ದಾರೆ.

1 ಪ್ರಧಾನಿ ನರೇಂದ್ರ ಮೋದಿಗೆ ಶೇ. 71 ರೇಟಿಂಗ್

2 ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಲೋಪೆಜ್ ಒಬ್ರಾಡರ್ ಶೇ. 66.

3 ಇಟಲಿ ಪ್ರಧಾನಿ ಮಾರಿಯೋ ಡಾಗ್ರಿ ಶೇ. 60.

4 ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಶೇ.48

5 ಜರ್ಮನಿ ಚಾನ್ಸಲರ್ ಓಲಾಫ್ ಸ್ಕೋಲ್ಜ ಶೇ. 44

6 ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೊಗೆ ಶೇ. 43.

7 ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಶೇ. 41.

8. ಚಿಲಿಯ ಫುಟ್ಬಾಲ್ ಆಟಗಾರ ಅಲಕ್ಸಿಸ್ ಸ್ಯಾಂಚೆಜ್ ಶೇ. 40

9. ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ ಶೇ. 37

10. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಶೇ. 34

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net