ಕರೊನಾ ಸವಾಲು ಹಾಗೂ ಕರೊನೋತ್ತರ ನಿರ್ವಹಣೆ ಕುರಿತು ನಾಳೆ ಪ್ರಧಾನಿ ಮೋದಿ ಜಾಗತಿಕ ಮಾತು...

modi
Published on

ನವದೆಹಲಿ: ಸದ್ಯ ಸವಾಲಾಗಿರುವ ಕರೊನಾ ಪಿಡುಗನ್ನು ಎದುರಿಸುವುದು ಹಾಗೂ ಕರೊನೋತ್ತರ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಜಾಗತಿಕ ಸಭೆಯಲ್ಲಿ ಮಾತನಾಡಲಿದ್ದಾರೆ.

ಕೋವಿಡ್​ ಪಿಡುಗನ್ನು ಎದುರಿಸುವ ಹಿನ್ನೆಲೆಯಲ್ಲಿ ವಿಶ್ವಾದ್ಯಂತದ ವಿಜ್ಞಾನಿಗಳು, ಸಂಶೋಧಕರು ಇರುವ ಈ ಗ್ರ್ಯಾಂಡ್​​ ಚಾಲೆಂಜಸ್​ ಆ್ಯನುವಲ್​ ಮೀಟಿಂಗ್ 2020 ಆಯೋಜಿಸಲಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಅವರು ನಾಳೆ ರಾತ್ರಿ 7.30ಕ್ಕೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗವಹಿಸಲಿದ್ದು, ಮುಖ್ಯಅತಿಥಿ ಆಗಿ ಮಾತನಾಡಲಿದ್ದಾರೆ.

ಗ್ರ್ಯಾಂಡ್​ ಚಾಲೆಂಜಸ್​ ಆ್ಯನುವಲ್​ ಮೀಟ್​ ಕಳೆದ 15 ವರ್ಷಗಳಿಂದ ನಡೆಯುತ್ತಿದ್ದು, ಆರೋಗ್ಯ ಮತ್ತು ಅಭಿವೃದ್ಧಿ ಸಂಬಂಧಿತ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತ ಬಂದಿದೆ. 40 ದೇಶಗಳ ಸುಮಾರು 1,600 ಗಣ್ಯರು ಈ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net