

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣ ವ್ಯಾಪಕ ವಾಗುತ್ತಿರುವ ಬೆನ್ನಲ್ಲೇ ಮಾರಕ ವೈರಸ್ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಗುರು ವಾರ ರಾತ್ರಿ 8ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಭಾಷಣಕ್ಕೂ ಮೊದಲು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಸೋಂಕಿತರ ಪರೀಕ್ಷಾ ಸೌಲಭ್ಯ ವಿಸ್ತರಣೆ ಮುಖ್ಯವಾಗಿ ಚರ್ಚೆಯಾಗುವ ನಿರೀಕ್ಷೆ ಇದೆ.