ದೇಶವನ್ನು ಅಭಿದ್ಧಿಯತ್ತ ಕೊಂಡೊಯ್ದ ಮೋದಿ

ashwath narayana
ಕೋಲಾರದಲ್ಲಿ ಹಮ್ಮಿಕೊಂಡಿದ್ದ ಉದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂಮ ಶಾಸಕ ಅಶ್ವತ್ಥ್​ನಾರಾಯಣ ಮಾತನಾಡಿದರು. ಎಸ್​.ಮುನಿಸ್ವಾಮಿ, ಓಂಶಕ್ತಿ ಚಲಪತಿ, ವರ್ತೂರು ಆರ್​.ಪ್ರಕಾಶ್​ ಇದ್ದರು.
Published on

ಕೋಲಾರ: ಬಹು ವರ್ಷಗಳ ಕಾಲ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯುವಲ್ಲಿ ವಿಲವಾಗಿತ್ತು. ಆದರೆ 11 ವರ್ಷದಲ್ಲಿ ಎನ್​ಡಿಎ ಸರ್ಕಾರ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಸಿ.ಎನ್​.ಅಶ್ವತ್ಥ್​ನಾರಾಯಣ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷ ಪೂರೈಸಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸ್ವಾವಲಂಭಿ ಬದುಕು ರೂಪಿಸಿಕೊಳ್ಳುವ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಯುಪಿಎಗೆ ಹೊಲಿಕೆ ಮಾಡಿದರೆ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಯಾಗಿದೆ. ಮೋದಿ ಕಾರ್ಯವೈಖರಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ಇಡೀ ಪ್ರಪಂಚವೇ ಕೊಂಡಾಡುತ್ತಿದೆ. ಡಾ.ಬಿ.ಆರ್​.ಅಂಬೇಡ್ಕರ್​ ಅವರು ಸಂವಿಧಾನ ರಚನೆ ಮಾಡಿ ಭಾರತಕ್ಕೆ ಕೊಟ್ಟಿದ್ದು, ಉದ್ದೇಶಗಳನ್ನು ಈಡೇರಿಸುವ ಕೆಲಸ ಈಡೇರಿಸುವ ಪ್ರಯತ್ನ ಕೇಂದ್ರ ಸರ್ಕಾರ ಮಾಡಿದೆ. ಸಬ್​ ಕೇ ಸಾಥ್​, ಸಬ್​ ಕೇ ವಿಕಾಸ ಪರಿಕಲ್ಪನೆಯಡಿ ಅಭಿವೃದ್ಧಿಯತ್ತ ದೇಶವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು.

ದೇಶದಲ್ಲಿ 13 ಕೋಟಿ ಶೌಚಗೃಹ, ಮನೆಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಜೆಜೆಎಂ ಯೋಜನೆ ಜಾತಿ, ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್​ ಸಂಪರ್ಕ. ಆಹಾರ ಭದ್ರತೆ ಒದಗಿಸಿದ್ದು ರಾಜ್ಯದ ಜನಕ್ಕೆ ಶೇ.95 ಸೌಲಭ್ಯ ದೊರೆಯುತ್ತಿದೆ. ಅಪೌಷ್ಟಿಕತೆ ನಿಮೂರ್ಲನೆಗೆ ಸೌಕರ್ಯ ಕಲ್ಪಿಸಿರುವುದು ನಮ್ಮ ಸರ್ಕಾರ. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದೆ ಎಂದು ತಿಳಿಸಿದರು.

ಮಾಜಿ ಸಂಸದ ಎಸ್​.ಮುನಿಸ್ವಾಮಿ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್​ ಬಾಬು, ಮಾಜಿ ಅಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ಜಿಲ್ಲಾ ಮಾಧ್ಯಮ ಪ್ರಮುಖ್​ ಪ್ರವಿಣ್​ಗೌಡ ಇದ್ದರು.

* ಒಬ್ಬರನ್ನು ದೂಷಣೆ ಮಾಡುವುದೇ ಕಾಂಗ್ರೆಸ್​ ಮನಸ್ಥಿತಿ

ಒಳ್ಳೆ ಕೆಲಸ ಮಾಡುವ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂಬ ಮನೋಭಾವಿಲ್ಲ. ರಾಜ್ಯದ 7.5 ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಸಿಎಂ ಕೇಂದ್ರದ ಬಗ್ಗೆ ಲೇವಡಿ ಮಾಡಿ ಅಗೌರವ ತೋರಿದ್ದಾರೆ. ವೈಯಕ್ತಿಕ ವಿಚಾರ ಇದ್ದರೆ ಪಕ್ಷದಲ್ಲಿ ಇಟ್ಟುಕೊಳ್ಳಬೇಕು, ಜನರ ಹಿತ ಕಾಯುವ ರೀತಿ ನಡೆದುಕೊಳ್ಳುವುದಿಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ ಎಂದು ಅಶ್ವತ್ಥ್​ನಾರಾಯಣ ಹೇಳಿದರು. ಕಾಂಗ್ರೆಸ್​ಗೆ ಜ್ಞಾನೋದಯವಾಗಿರುವ ಹಿನ್ನಲೆಯಲ್ಲಿ ಜಾತಿಗಣತಿ ಮಾಡಲು ಮುಂದಾಗಿದೆ. ಹಿಂದೆ ಕ್ರಮ ಬದ್ಧವಾಗಿ ಮಾಡಿಲ್ಲ ಅಂತ ಸರ್ಕಾರವೇ ಒಪ್ಪಿಕೊಂಡಿದೆ. ಭಾರತ ಸರ್ಕಾರ 20 ಕೋಟಿ ಮೀಸಲಿಟ್ಟು ಮೀಸಲಾತಿ, ಜಾತಿ ಗಣತಿ ಮಾಡಿ ವರದಿ ನೀಡುತ್ತದೆ. ಸರ್ಕಾರ ಅಲ್ಲಿಯ ತನಕ ಕಾಯಬೇಕು ಎಂದು ಸಲಹೆ ನೀಡಿದರು.

* ತುಷ್ಟೀಕರಣ ರಾಜಕಾರಣ

ಕಾಂಗ್ರೆಸ್​ ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಕಾನೂನನ್ನು ದುರ್ಬಳಕೆ ಮಾಡಿಕೊಂಡು ದಣ ಕನ್ನಡ ಜಿಲ್ಲೆಯಲ್ಲಿ ಹಿಂದು ಕಾರ್ಯಕರ್ತರನ್ನು ಗಡಿಪಾರು ಮಾಡುವ ಕ್ರಮಕ್ಕೆ ಮುಂದಾಗಿದೆ. ಅಲ್ಪ ಸಂಖ್ಯಾತರನ್ನು ಓಲೈಸಲು ಪ್ರಯತ್ನ ಮಾಡುತ್ತಿದೆ. ಗೃಹ ಇಲಾಖೆ ಸಮರ್ಪಕವಾಗಿ ಇಲ್ಲದೆ ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ಬವಿಸಿದೆ ಎಂದು ಕಿಡಿಕಾರಿದರು. ಗೋವುಗಳ ಹತ್ಯೆ, ಮಾದಕ ವಸ್ತುಗಳ ಸಾಗಾಟ, ಮಾರಾಟ ಜೋರಾಗಿಯೇ ನಡೆಯುತ್ತಿದೆ. ಇದಕ್ಕೆಲ್ಲಾ ಗೃಹ ಇಲಾಖೆ ವಿಫಲತೆಯೆ ಕಾರಣ. ಇದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ಬಹಿರಂಗ ಪಡಿಸಲಾಗುವುದು ಎಂದರು.

* ಬಿಜೆಪಿ ನೀಡಿದ್ದ ಅನುದಾನಕ್ಕೆ ಭೂಮಿಪೂಜೆ

ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ತಂದು ಮಂಜೂರು ಮಾಡಿಸಿದ್ದ 50 ಕೋಟಿ ರೂ. ಅನುದಾನಕ್ಕೆ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್​, ಎಂಎಲ್ಸಿ ಅನಿಲ್​ ಕುಮಾರ್​ ಭೂಮಿಪೂಜೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ದೂರಿದರು. ಕಾಂಗ್ರೆಸ್​ನಿಂದ ಜಿಲ್ಲೆಗೆ ಇದುವರೆಗೂ ಅನುದಾನ ಕೊಡೊದಿಕ್ಕೆ ಆಗಿಲ್ಲ, ಲ್ಯಾಂಡ್​ ಆರ್ಮಿ, ನಿರ್ಮಿತಿ ಕೇಂದ್ರದಿಂದ ಯಾರೆಲ್ಲ ಗುತ್ತಿಗೆ ಪಡೆದುಕೊಂಡಿದ್ದಾರೆ ಎಂದು ಬಹಿರಂಗ ಪಡಿಸುತ್ತೇನೆ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net