'ಮೋದಿ ಜೀ ನಿಮ್ಮ ಸೋಷಿಯಲ್ ಮೀಡಿಯಾವನ್ನು ನನಗೇ ಬಿಟ್ಟುಕೊಡಿ, ನಿಮ್ಮ ವಿರೋಧಿಗಳಿಗೆ ಏನೋ ಹೇಳುವುದಿದೆ..' ಎಂದ ಕಂಗನಾ ರಣಾವತ್​ ಸೋದರಿ ರಂಗೋಲಿ...

Rangoli Chandel 4 March 20
Published on

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ದಿನಾಚರಣೆ ದಿನ ಸಾಧಕ ಮಹಿಳೆಯರಿಗಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಬಿಟ್ಟುಕೊಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು #SheInspiresUs ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಸಾಧಕ ಮಹಿಳೆಯರು ತಮ್ಮ ಸ್ಫೂರ್ತಿದಾಯಕ ಕತೆಯನ್ನು ಹಂಚಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳನ್ನು ಬಳಸುವ ಸ್ಫೂರ್ತಿದಾಯಕ ಮಹಿಳೆಯರು ಯಾರಾಗಬಹುದು ಎಂಬ ಕುತೂಹಲ ಹುಟ್ಟಿಕೊಂಡಿದೆ. ಈ ಬೆನ್ನಲ್ಲೇ ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಸಹೋದರಿ ರಂಗೋಲಿ ಚಾಂದೇಲ್​, ದಯವಿಟ್ಟು ನಿಮ್ಮ ಖಾತೆಯನ್ನು ನನಗೇ ಬಿಟ್ಟುಕೊಡಿ ಎಂದು ಮೋದಿಯವರನ್ನು ಕೇಳಿಕೊಂಡಿದ್ದಾರೆ.

ಮಹಿಳಾ ದಿನಾಚರಣೆಗೆ ಸಂಬಂಧಪಟ್ಟು ನರೇಂದ್ರ ಮೋದಿಯವರು ಮಾಡಿದ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡಿರುವ ರಂಗೋಲಿ ಚಾಂದೇಲ್​, ಮೋದಿ ಜೀ ದಯವಿಟ್ಟು ನನಗೆ ನಿಮ್ಮ ಸೋಷಿಯಲ್​ ಮೀಡಿಯಾ ಬಳಸಲು ನನಗೊಂದು ಅವಕಾಶ ಕೊಡಿ. ನಿಮ್ಮ ವಿರೋಧಿಗಳಿಗೆ ನನ್ನ ಮನಸಿನಲ್ಲಿರುವ ಒಂದು ಸ್ವಲ್ಪ ವಿಚಾರಗಳನ್ನು ತಿಳಿಸುವುದಿದೆ ಎಂದು ಟ್ವೀಟ್ ಮಾಡಿದ್ದಾರೆ.

ರಂಗೋಲಿ ಚಾಂದೇಲ್​ ಮಾತ್ರವಲ್ಲ ಕಂಗನಾ ರಣಾವತ್​ ಕೂಡ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರು. ಮೋದಿಯವರು ಪ್ರಧಾನಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಪ್ರಜಾಪ್ರಭುತ್ವಕ್ಕೆ ಸಮರ್ಥ ನಾಯಕ ಎಂದು ಈ ಹಿಂದೆ ಕಂಗನಾ ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net