ಮೋದಿ ರಾಜಕೀಯ ವಿರೋಧಿಗಳ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಇತಿಹಾಸ ಹೊಂದಿದ್ದಾರೆ: TMC ಸಂಸದೆ ಮಹುವಾ ಮೊಯಿತ್ರಾ| Mahua Moitra

Mahua Moitra 2
Published on

Mahua Moitra: ಪ್ರಧಾನಿ ನರೇಂದ್ರ ಮೋದಿಯವರ ಮೈಂಡ್ ಯುವರ್ ಲಾಂಗ್ವೇಜ್ ಭಾಷಣ ಸ್ವಲ್ಪ ಶ್ರೀಮಂತವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಮೊಯಿತ್ರಾ, ಪ್ರಧಾನಿ ಮೋದಿ ರಾಜಕೀಯ ವಿರೋಧಿಗಳ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ ಇತಿಹಾಸವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ಧಾರೆ.

ಬೀದಿ ಬದಿಯಲ್ಲಿ ನಡೆದ ದೀದಿ ಓ ದೀದಿ ಕೂಗಿನಿಂದ ಹಿಡಿದು ಸೋನಿಯಾ ಗಾಂಧಿಜಿ ವಿರುದ್ಧ ಜೆರ್ಸಿ ಕೌ ಮತ್ತು ಕಾಂಗ್ರೆಸ್ ವಿಧ್ವಾವರೆಗೆ, ಶಶಿ ತರೂರ್​ ಪತ್ನಿಗೆ 50 ಕೋಟಿ ಗಿಲ್‌ಫ್ರೆಂಡ್ ಎಂದು ಗೌರವಾನ್ವಿತ ನರೇಂದ್ರ ಮೋದಿ ಎಲ್ಲವನ್ನೂ ಹೇಳಿದ್ದಾರೆ. ಇಂದಿನ ಮೋದಿಯ ಮೈಂಡ್ ಯುವರ್ ಲಾಂಗ್ವೇಜ್ ಭಾಷಣ ಸ್ವಲ್ಪ ಶ್ರೀಮಂತವಾಗಿದೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.

ಬಿಹಾರ ರಾಜ್ಯ ಜೀವಿಕಾ ನಿಧಿ ಶಾಖ್ ಸಹಕಾರಿ ಸಂಘ ಲಿಮಿಟೆಡ್ ಅನ್ನು ಪ್ರಾರಂಭಿಸಿದ ವರ್ಚುವಲ್ ಈವೆಂಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದರು. ತಮ್ಮ ದಿವಂಗತ ತಾಯಿಗೆ ಮಾಡಿರುವ ಅವಮಾನದ ವಿವಾದವನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಈ ವಿಷಯದಿಂದ ನನಗೆ ತುಂಬಾ ನೋವಾಗಿದೆ ಎಂದು ಹೇಳಿದರು.

ಬಿಹಾರದ ಎಲ್ಲಾ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಇದು ಅವಮಾನ ಎಂದು ಪ್ರಧಾನಿ ಮೋದಿ ಬಿರುಸಿನ ಧ್ವನಿಯಲ್ಲಿ ತಿಳಿಸಿದ್ದಾರೆ.

ತಾಯಿಯನ್ನು ನೆನಪಿಸಿಕೊಂಡ ಮೋದಿ

ತನ್ನ ತಾಯಿಯಿಂದ ಹೇಗೆ ಬೆಳೆದರು ಎಂಬುದನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಅವರು ತಮ್ಮನ್ನು ಮತ್ತು ಕುಟುಂಬವನ್ನು ತೀವ್ರ ಬಡತನದಲ್ಲಿ ಬೆಳೆಸಿದರು ಎಂದು ಹೇಳಿದರು, ಅಲ್ಲದೆ, ತನಗಾಗಿ ಎಂದಿಗೂ ಹೊಸ ಸೀರೆಯನ್ನು ಖರೀದಿಸುವುದಿಲ್ಲ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರತಿ ಪೈಸೆಯನ್ನೂ ಉಳಿಸುತ್ತಿದ್ದರು ಎಂದು ಹೇಳಿದ್ದಾರೆ.

ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿಯನ್ನು ಟೀಕಿಸಿದ ಮೋದಿ, ರಾಜಮನೆತನದಲ್ಲಿ ಜನಿಸಿದ ಈ ಯುವರಾಜರು ಬಡ ತಾಯಿಯ ತಪಸ್ಸು ಮತ್ತು ಆಕೆಯ ಮಗನ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ರಾಹುಲ್​ ಮತ್ತು ತೇಜಸ್ವಿ ಬಾಯಿಯಲ್ಲಿ ಬೆಳ್ಳಿ ಚಮಚದೊಂದಿಗೆ ಜನಿಸಿದರು. ದೇಶದ ಮತ್ತು ಬಿಹಾರದ ಶಕ್ತಿ ತಮ್ಮ ಕುಟುಂಬದ ಪರಂಪರೆ ಎಂದು ಭಾವಿಸುತ್ತಾರೆ. ಸಿಎಂ ಹಾಗೂ ಪಿಎಂ ಕುರ್ಚಿಯನ್ನು ಮಾತ್ರ ಪಡೆಯಬೇಕೆಂದು ಭಾವಿಸುತ್ತಾರೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net