MSP: ದೀಪಾವಳಿಗೆ ಮುನ್ನ ರೈತರಿಗೆ ಬಂಪರ್​ ಗಿಫ್ಟ್​.. ಆ ಆರು ಕೃಷಿ ಉತ್ಪನ್ನಕ್ಕೆ ಎಂಎಸ್ಪಿ ಹೆಚ್ಚಿಸಿದ ಕೇಂದ್ರ

Wheet Rice
Published on

ನವದೆಹಲಿ: ದೀಪಾವಳಿಗೂ ಮುನ್ನವೇ ಕೇಂದ್ರ ಸಚಿವ ಸಂಪುಟ ರೈತರಿಗೆ ಉಡುಗೊರೆ ನೀಡಿದೆ. ಬುಧವಾರ(ಅ.16) ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಆರು ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ(MSP) ಹೆಚ್ಚಳವನ್ನು ಘೋಷಿಸಿದೆ.

ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸಂಪುಟ ಸಭೆಯಲ್ಲಿ ರೈತರಿಗಾಗಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 2025-26 ರ ರಬಿ ಮಾರ್ಕೆಟಿಂಗ್ ಸೀಸನ್‌ಗೆ ಎಂಎಸ್‌ಪಿ ಬಗ್ಗೆ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ. 6 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು

ಬೆಳೆಗಳ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 300 ರೂ.ಗಳಷ್ಟು ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ, ಬೆಳೆಗಳ ಮಾರ್ಜಿನ್ ವೆಚ್ಚವನ್ನು 50 ಪ್ರತಿಶತದಷ್ಟು ಹೆಚ್ಚಿಸಲಾಗಿದೆ ಡಂದು ವಿವರಿಸಿದರು.

ಗೋಧಿ ಕ್ವಿಂಟಲ್‌ಗೆ 2425 ರೂ., ಬಾರ್ಲಿಗೆ 130 ರೂ., ಕಡಲೆಗೆ 210 ರೂ., ಸೋನಾ ಮಸೂರಗೆ 275 ರೂ., ಸಾಸಿವೆಗೆ 300 ರೂ., ಕುಸುಮಲಕ್ಕಿಗೆ 140 ರೂ.,ಗೆ ಎಂಎಸ್​ಪಿ ಹೆಚ್ಚಿಸಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net