

ನವದೆಹಲಿ: ಮಹಿಳೆಯೊಬ್ಬಳು ತನ್ನ ರಕ್ತವನ್ನು ತಾನೇ ಕುಡಿಯುತ್ತಿದ್ದಾಳೆ ಎಂದು ಹೇಳಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಮಾಡೆಲ್ ಸೋಫಿಯಾ ಕ್ಲೆರಿಕಿ ಮಾದಕ ಮೈಮಾಟದಿಂದಲೇ ಸೋಫಿಯಾ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡಿದ್ದಾಳೆ. ಪ್ರತೀ ಬಾರಿ ಆಕೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದಾಗ ಆಕೆಯ ಅಭಿಮಾನಿಗಳು “ಬ್ಯೂಟಿ ಸೀಕ್ರೇಟ್ ಏನು” ಎಂದು ಕಾಮೆಂಟ್ ಮಾಡುತ್ತಿದ್ದರು.
ತನ್ನ ಅಭಿಮಾನಿಗಳ ಪ್ರಶ್ನೆಗೆ ಇತ್ತೀಚೆಗಷ್ಟೇ ಉತ್ತರ ನೀಡಿದ್ದು, ಆಕೆಯ ಉತ್ತರ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ವಯಸ್ಸಾದರೂ ಹಾಟ್ ಆಗಿ ಕಾಣಲು ನಾನು ನನ್ನ ರಕ್ತವನ್ನೇ ಕುಡಿಯುತ್ತೇನೆ ಎಂದು ಸೋಫಿಯಾ ಹೇಳಿಕೊಂಡಿದ್ದಾಳೆ.
“ನಾನು ನನ್ನ ರಕ್ತವನ್ನು ಜ್ಯೂಸ್ನೊಂದಿಗೆ ಬೆರೆಸಿ ಕುಡಿಯುತ್ತೇನೆ. ನನ್ನ ಬ್ಯಾಗಿನಲ್ಲಿ ಟ್ಯೂಬ್ನಲ್ಲಿ ರಕ್ತ ಇರಿಸಿಕೊಂಡು ಹೋಗುತ್ತೇನೆ” ಎಂದು ಹೇಳಿಕೊಂಡಿದ್ದಾಳೆ. ವಿಚಿತ್ರ ಅಭ್ಯಾಸವನ್ನು ಕಂಡು ನೆಟ್ಟಿಗರು ಹಾಗೂ ಆಕೆಯ ಅಭಿಮಾನಿಗಳು ಫುಲ್ ಶಾಕ್ ಆಗಿ ಹೋಗಿದ್ದಾರೆ.