ಸುನಿ ಇಲ್ಲಿ ‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ಯ ಜತೆಗೆ ಸೈಕಲಾಜಿಕಲ್ ಅಂಶಗಳನ್ನು ಸೇರಿಸಿದ್ದು, ಸರಳ ತ್ರಿಕೋನ ಪ್ರೇಮಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲಿಂಗ್ ವಿಷಯಗಳ ಮೂಲಕ ‘ಚಮಕ್’ ಕೊಡುತ್ತಾರೆ. ಸ್ಪ್ಲಿಟ್ ಪರ್ಸನಾಲಿಟಿದಿಂದಾಗಿ (ಭಿನ್ನ ವ್ಯಕ್ತಿತ್ವ) ದ್ವಿತೀಯಾರ್ಧದಲ್ಲಿ ಇಡೀ ಕಥೆಯೇ ಬದಲಾಗಿ ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ. ಹಾಗಂತ, ಕೊರತೆಗಳು ಇಲ್ಲವೆಂತಲ್ಲ, ಕೆಲ ದೃಶ್ಯಗಳು ಪುನಾರವರ್ತಿತಗೊಂಡಾಗ ಗೊಂದಲ ಅನಿಸುವುದು ಸಹಜ. ಅದು ಹೊರತುಪಡಿಸಿದರೆ ಸಾದಾ ಸೀದಾ ನಗಿಸುತ್ತಲೇ ಸುನಿ ಪ್ರೇಕ್ಷಕರನ್ನು ಸೀಟಂಚಿನಲ್ಲಿ ಕೂರಿಸುತ್ತಾರೆ. ಶೀಲಂ ಸ್ವಾಮಿ ಚೆನ್ನಾಗಿ ಅಭಿನಯಿಸಿದ್ದು, ಡೈಲಾಗ್ ಹೇಳುವಾಗ ಸುನಿ ಮಾತನಾಡಿದಂತೆಯೇ ಭಾಸವಾಗುತ್ತದೆ. ಮೋಕ್ಷಾ ಮತ್ತು ಸಾತ್ವಿಕಾ ಚಿತ್ರಕ್ಕೆ ಗ್ಲಾಮರ್ ಜತೆಗೆ ಉತ್ತಮ ಅಭಿನಯದ ಮೂಲಕ ಗ್ರಾಮರ್ ಕೂಡ ಸೇರಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ‘ಮೋಡ ಕವಿದ ವಾತಾವರಣ’ದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.