ಶೀಲಂ ಬದುಕಿನಲ್ಲಿ ‘ಸುನಿ’ಮಳೆ: ‘ಮೋಡ ಕವಿದ ವಾತಾವರಣ’ ಚಿತ್ರದ ನಟನ ಪಾತ್ರಕ್ಕೆ ಎಲ್ಲೆಡೆ ಮೆಚ್ಚುಗೆ

ಶೀಲಂ ಎಂ. ಸ್ವಾಮಿ
ಶೀಲಂ ಎಂ. ಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಮೋಡ ಕವಿದ ವಾತಾವರಣ ಮೂಲಕ ಹೀರೋ ಆದ ಶೀಲಂ ಸ್ವಾಮಿ
  • ಸುನಿ ಗರಡಿಯಲ್ಲಿ ಪಳಗಿರುವ ಚಿತ್ರದುರ್ಗದ ಮೂಲಕ ಕಲಾವಿದ
  • ಮೊದಲ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ
ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ನಿರ್ದೇಶಕ ಸಿಂಪಲ್ ಸುನಿ ಗರಡಿಯಲ್ಲಿ ಪಳಗಿರುವ ಚಿತ್ರದುರ್ಗ ಮೂಲದ ಶೀಲಂ ಸ್ವಾಮಿ ಇದೀಗ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಟನಾಗಿ ಪರಿಚಯವಾಗಿದ್ದಾರೆ. ಈ ಹಿಂದೆ ಸಹಾಯಕ ನಿರ್ದೇಶಕನಾಗಿ ಮತ್ತು ಎರಡು-ಮೂರು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಇದೀಗ ಪೂರ್ಣಪ್ರಮಾಣದ ನಾಯಕನಾಗಿದ್ದಾರೆ. ಈ ಸಿನಿಮಾ ಇದೇ 26ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆವ್ಯಕ್ತವಾಗುತ್ತಿದೆ. ‘ಮೊದಲ ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿರುವುದು ಖುಷಿ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ’ ಎಂದು ಮಾತು ಆರಂಭಿಸಿದ ಶೀಲಂ, ‘ಈ ಕಥೆಗೆ ನೀನೆ ನಾಯಕ ಎಂದಾಗ ಖುಷಿಯಾದೆ ವಿನಾ ಓವರ್ ಎಕ್‌ಸ್ಟ್‌ಮೆಂಟ್ ಏನೂ ಆಗಲಿಲ್ಲ. ಸುನಿ ಸರ್ ಪಾತ್ರವನ್ನು ವಿನ್ಯಾಸಗೊಳಿಸಿದಂತೆ ಅದಕ್ಕೆ ಸಿದ್ಧತೆ ನಡೆಸಿದೆ. ಆರು ತಿಂಗಳುಗಳ ಕಾಲ ಸ್ಕ್ರಿಪ್ಟ್ ಹಿಡಿದುಕೊಂಡೆ ಡೈಲಾಗ್, ನಟನೆಯ ತಯಾರಿ ನಡೆಸಿದೆ. ಜತೆಗೆ ದೇಹವನ್ನು ಹುರಿಗೊಳಿಸಿದೆ. ಡಾನ್ಸ್ ಕಲಿತೆ. ಈ ಕಲಿಕೆಯಲ್ಲಿ ಖುಷಿ ಜತೆಗೆ ಸ್ವಲ್ಪ ಒತ್ತಡವೂ ಇತ್ತು. ಮೊದಲಿಗೆ ಕ್ಯಾಮರಾ ಮುಂದೆ ನಿಂತಾಗ ಸಾಮಾನ್ಯವಾಗಿ ಭಯವಾಗುತ್ತದೆ. ಆದರೆ, ನನಗೆ ಆ ಭಯದ ವಾತಾವರಣ ಇರಲಿಲ್ಲ. ಈ ಹಿಂದೆ ಕೆಲಸ ಮಾಡಿದವರೇ ಬಹುತೇಕರು ಅಲ್ಲಿದ್ದ ಕಾರಣ ಅಭಿನಯಸಲು ಸುಲಭವಾಯಿತು. ಮೊದಲ ಸಿನಿಮಾಕ್ಕೆ ಬೇರೆಯವರು ನಿರ್ದೇಶಕರು ಇದ್ದರೆ, ನನಗೆ ಕಷ್ಟವಾಗುತ್ತಿತ್ತೇನೂ ಆದರೆ, ಸುನಿ ಸರ್ ಗರಡಿಯಲ್ಲಿಯೇ ಬೆಳದವನಾದ ಕಾರಣ ನನಗೆ ಅವರ ಜೀವನಾಡಿ ಗೊತ್ತಿತ್ತು. ಅವರ ಕೆಲಸದ ಶೈಲಿ ಅರಿತು ಅಭಿನಯಿಸಿದ್ದೇನೆ. ‘ಮೋಡ ಕವಿದ ವಾತಾವರಣ’ ಸಿನಿಮಾಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಪ್ರೇಕ್ಷಕರು ನನ್ನ ಅಭಿನಯವನ್ನು ಮೆಚ್ಚಿದ್ದಾರೆ. ಜತೆಗೆ ಬಹುಭಾಷಾ ನಟ ಆರ್.ಮಾಧವನ್ ವಿಶೇಷ ಸಂದೇಶ ಕಳುಹಿಸಿದ್ದಾರೆ. ನಟರಾದ ಗಣೇಶ್ ಸರ್, ಶರಣ್ ಸರ್, ನಟಿಯರಾದ ಆಶಿಕಾ ರಂಗನಾಥ್, ಮೇಘನಾ ಗಾಂವ್ಕರ್ ಸೇರಿ ಹಲವರು ಸಿನಿಮಾ ನೋಡಿ ಅಭಿನಂದಿಸಿದ್ದಾರೆ’ ಎಂದು ಶೀಲಂ ಖುಷಿ ಹಂಚಿಕೊಳ್ಳುತ್ತಾರೆ. ಸದ್ಯ ‘ಮೋಡ ಕವಿದ ವಾತಾವರಣ’ ಚಿತ್ರದ ಪ್ರತಿಕ್ರಿಯೆಯಾಗಿಯೇ ಬೇರೆ ಯಾವ ಕಥೆಗಳನ್ನು ಕೇಳಿವಲ್ಲವಂತೆ. ಇನ್ಮುಂದೆ ಒಳ್ಳೆಯ ಪಾತ್ರಗಳ ಮೂಲಕ ಜನರ ಮುಂದೆ ಬರುವೆ’ ಎಂದು ಭರವಸೆವ್ಯಕ್ತಪಡಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net