ಬಸ್​ ಹತ್ತುವಾಗ ಪ್ರಯಾಣಿಕರ ಮೊಬೈಲ್​​ ಎಗರಿಸುತ್ತಿದ್ದ ಖದೀಮರು!

a
Published on

ರಾಮನಗರ: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್​ ಹತ್ತುವಾಗ ಜನರ ಜೇಬಿನಿಂದ ಮೊಬೈಲ್​ ಹಾರಿಸಿಕೊಂಡು ಹೋಗುತ್ತಿದ್ದ ನಾಲ್ಕು ಜನ ಚಾಲಾಕಿ ಕಳ್ಳರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಐಜೂರು ಠಾಣೆ ಪೊಲೀಸರು ನಡೆಸಿದ ಭರ್ಜರೀ ಕಾರ್ಯಾಚರಣೆಯಲ್ಲಿ 3 ಲಕ್ಷ ರೂಪಾಯಿ ಬೆಲೆ ಬಾಳುವ ವಿವಿಧ ಕಂಪನಿಗಳ 42‌ ಮೊಬೈಲ್​​ಗಳನ್ನು ಈ ಕಳ್ಳರಿಂದ ವಶಪಡಿಸಿಕೊಳ್ಳಲಾಗಿದೆ.

ಮೈಸೂರು ಮೂಲದ ಗೌಸ್ ಪೀರ್(29), ಮುಹಮ್ಮದ್ ಇಮ್ರಾನ್(23) ಹಾಗೂ ರಾಮನಗರ ಮೂಲದ ನಿಖಿಲ್(22), ಪ್ರಕಾಶ್(18) ಬಂಧಿಸಲ್ಪಟ್ಟ ನಾಲ್ವರು ಮೊಬೈಲ್‌ ಕಳ್ಳರು. ಇವರು ಸಾಮಾನ್ಯವಾಗಿ ಬಸ್ ನಿಲ್ದಾಣಗಳಲ್ಲೇ ಮೊಬೈಲ್​ ಕಳ್ಳತನ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಹತ್ತುವಾಗ ಪ್ರಯಾಣಿಕರ ಸೋಗಿನಲ್ಲಿ ಇರುತ್ತಿದ್ದ ಆರೋಪಿಗಳು, ಪ್ರಯಾಣಿಕರಿಗೆ ಗೊತ್ತಾಗದ ಹಾಗೆ ಚಾಲಾಕಿತನದಿಂದ ಜೇಬುಗಳಿಂದ ಮೊಬೈಲ್ ಕದಿಯುತ್ತಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net