ದೇವರ ಬಟ್ಟೆ ಖರೀದಿಸುವ ನೆಪದಲ್ಲಿ ಬಂದು ಅಂಗಡಿ ಮಾಲೀಕನ ಮೊಬೈಲ್​ ಕದ್ದ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ...

CCtv 3 Feb 20
Published on

ಬೆಂಗಳೂರು: ದೇವರ ಬಟ್ಟೆ ಖರೀದಿಸುವ ನೆಪದಲ್ಲಿ ಬಂದವ ಅಂಗಡಿ ಮಾಲೀಕನ ಮೊಬೈಲ್​ ಕದ್ದಿದ್ದಾನೆ. ಚಾಲಾಕಿ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.

ಬಸವನಗುಡಿಯ ಗಾಂಧಿ ಬಜಾರ್​ನಲ್ಲಿರುವ ಗ್ರಂಧಿಗೆ ಅಂಗಡಿಗೆ ಬಂದಿದ್ದ ವ್ಯಕ್ತಿ ತನಗೆ ದೇವರ ಬಟ್ಟೆ ಬೇಕು ಎಂದಿದ್ದಾನೆ. ಅಲ್ಲದೆ ಒಂದು ಬಟ್ಟೆಯನ್ನು ಅಂಗಡಿಯವನಿಗೆ ತೋರಿಸಿ, ಇದೇ ಮಾದರಿಯದ್ದನ್ನು ತೆಗೆದುಕೊಂಡಿ ಎಂದು ಕೇಳಿದ್ದಾನೆ. ಆಗ ಅಂಗಡಿ ಮಾಲೀಕ ತನ್ನ ಮೊಬೈಲ್​ನ್ನು ಅಲ್ಲಿಯೇ ಇದ್ದ ಟೇಬಲ್​​ ಮೇಲೆ ಇಟ್ಟು ಬಟ್ಟೆ ತೆಗೆಯಲೆಂದು ಹೋದ ಕೂಡಲೇ ಇತ್ತ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ.

ತನ್ನ ಕೈಲ್ಲಿದ್ದ ಬಟ್ಟೆಯನ್ನು ಟೇಬಲ್​ ಮೇಲೆ ಇದ್ದ ಮೊಬೈಲ್​ ಮೇಲೆ ಹಾಕಿ ಅದನ್ನು ಎತ್ತಿದ್ದಾನೆ. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ ಇದೇ ರೀತಿ ಹಲವು ಅಂಗಡಿಗಳಲ್ಲಿ ಕಳವು ಮಾಡಿದ್ದಾನೆ ಎನ್ನಲಾಗಿದೆ. ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net