

ಬೆಂಗಳೂರು: ಮೊಬೈಲ್ ಕದಿಯುತ್ತಿದ್ದ ಮೂವರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಂದ್ರಾ ಲೇಔಟ್ನ ಸೈಯದ್ ನದೀಮ್(23), ಚೋಳರಪಾಳ್ಯದ ಇರ್ಫಾನ್ ಪಾಷಾ (20) ಮತ್ತು ಪಾದರಾಯನಪುರದ ಮೌಷಕ್ ಅಹಮ್ಮದ್ (44) ಬಂಧಿತರು.
ಸೋಮವಾರ ಬೆಳಗ್ಗೆ ಅಂಗವಿಕಲನ ಮೊಬೈಲ್ ಕಸಿದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಮೂವರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದಕ್ಕೂ ಮೊದಲು ಇವರು ಸಿದ್ದಾಪುರ, ಕನಕಪುರ ರಸ್ತೆ ಹಾಗೂ ಬನಶಂಕರಿಯಲ್ಲಿ ಮೂರು ಮೊಬೈಲ್ ಕಳವು ಮಾಡಿದ್ದರು.
ಮೊಬೈಲ್ನಲ್ಲಿ ಮಾತನಾಡಿಕೊಂಡು ದಾರಿಯಲ್ಲಿ ನಡೆದು ಹೋಗುತ್ತಿರುವವರನ್ನು ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದರು.
ಸಿದ್ದಾಪುರ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಗಳು ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.