ರಾಮೋಜಿಗೌಡರಿಗೆ ಭಾರಿ ಅಂತರದ ಗೆಲುವು

Published on

ಬೆಂಗಳೂರು:
ಶಿಕ್ಷಣವಂತರ, ಪ್ರಬುದ್ಧ ಮತದಾರರನ್ನು ಒಳಗೊಂಡ ಬೆಂಗಳೂರು ಪದವೀಧರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮೊದಲ ಸುತ್ತಿನಿಂದಲೂ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ ಅವರಿಗಿಂತಲೂ ಮೂರು ಸಾವಿರ ಲೀಡ್ ಪಡೆಯುತ್ತಲೇ ಪ್ರತಿ ಸುತ್ತಿಗೂ ಲೀಡ್ ಹೆಚ್ಚಿಸಿಕೊಂಡರು.
ಕಳೆದ ತಿಂಗಳಷ್ಟೇ ನಡೆದ ಬೆಂಗಳೂರು ಪದವೀಧರ ಮತಕ್ಷೇತ್ರದ ವ್ಯಾಪ್ತಿಯಡಿ ಬರುವ 5 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದೆ.
ಲೋಕಸಭಾ ಚುನಾವಣೆ ಮುಗಿದು ತಿಂಗಳ ಅಂತರದಲ್ಲಿ ನಡೆದ ಪದವೀಧರ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಕಾಂಗ್ರೆಸ್ ನ ರಾಮೋಜಿಗೌಡ ಬಹು ಅಂತರದಿಂದ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net