ಬಿಜೆಪಿಯಿಂದ ವಿಷಬೀಜ ಬಿತ್ತುವ ಕೆಲಸ

congres prachara
ಸೀತೂರು ಗ್ರಾಪಂ ನಾಗರಮಕ್ಕಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. ಗೇರ್‌ಬೈಲು ನಟರಾಜ, ಕೆ.ಎಂ.ಸುಂದರೇಶ್, ಇ.ಸಿ.ಜೋಯಿ, ಎಸ್.ಡಿ.ರಾಜೇಂದ್ರ, ಎಚ್.ಎಂ.ಮನು ಇತರರಿದ್ದರು.
Published on

ಎನ್.ಆರ್.ಪುರ: ಬಿಜೆಪಿ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.
ಶನಿವಾರ ಸೀತೂರು ಗ್ರಾಪಂ ನಾಗರಮಕ್ಕಿಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಧರ್ಮ ಮುಂದಿಟ್ಟುಕೊಂಡು ಯುವಜನರನ್ನು ದಾರಿ ತಪ್ಪಿಸುತ್ತಿದೆ. ಆದರೆ ಕಾಂಗ್ರೆಸ್ ಅಭಿವೃದ್ಧಿ ಮುಂದೆ ಇಟ್ಟುಕೊಂಡು ಚುನಾವಣೆಗೆ ಬಂದಿದೆ. ಬಿಜೆಪಿ ನಾಯಕರು ಹಿಂದಿನ ಚುನಾವಣೆಯಲ್ಲಿ ಯುವಜನರಿಗಾಗಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಉದ್ಯೋಗ ನೀಡಲಿಲ್ಲ. ತೈಲ ದರ, ಅಡುಗೆ ಅನಿಲ ಬೆಲೆ ಏರಿಕೆ ಮಾಡಿದರಲ್ಲದೆ ಭಾರತದ ಸಾಲ ಹೆಚ್ಚು ಮಾಡಿದರು. ಆ ಸಾಲವನ್ನು ದೇಶದ ಉದ್ಯಮಿಗಳು, ರೈತರು, ಜನಸಾಮಾನ್ಯರು, ಕೂಲಿಕಾರರು ತೀರಿಸಬೇಕಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ 5 ಗ್ಯಾರಂಟಿಯನ್ನೂ ಈಡೇರಿಸಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿ ಭರವಸೆ ನೀಡಿದ್ದು ಅದನ್ನು ಈಡೇರಿಸುತ್ತೇವೆ ಎಂದರು.
ಕಣಿವೆ, ಕೋಣನಕೆರೆ, ಶೆಟ್ಟಿಕೊಪ್ಪ, ಬಿ.ಎಚ್.ಕೈಮರದಲ್ಲೂ ಪ್ರಚಾರ ಮಾಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲು ನಟರಾಜ, ಮುಖಂಡರಾದ ಕೆ.ಎಂ.ಸುಂದರೇಶ್, ಇ.ಸಿ.ಜೋಯಿ, ಎಸ್.ಡಿ.ರಾಜೇಂದ್ರ, ಎಚ್.ಎಂ.ಮನು, ಕೆ.ಎ.ಅಬೂಬಕರ್, ಎನ್.ಪಿ.ರಮೇಶ್, ಎನ್.ಪಿ.ರವಿ, ಎಸ್.ಕೆ.ಚಿದಂಬರ್ ಪ್ರಸನ್ನ, ಸತೀಶ್, ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net