ಶಾಸಕ ಎಸ್.ಆರ್.ವಿಶ್ವನಾಥ್ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತೆಯರ ನಡುವೆ ಜಡೆ ಜಗಳ!

S R Vishwanath
Published on

ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತೆಯರು ಕಿತ್ತಾಡಿಕೊಂಡಿದ್ದಾರೆ. ಕಾಂಗ್ರೆಸ್​ ಕಾರ್ಯಕರ್ತೆ ಮಾಡಿದ್ದ ವಾಟ್ಸ್​ಆ್ಯಪ್​ ಮೆಸೇಜ್​ ಜಡೆ ಜಗಳಕ್ಕೆ ಕಾರಣವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತೆಯರು ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ಎಸ್​.ಆರ್​. ವಿಶ್ವನಾಥ್​ ಕುರಿತು ಬಿಜೆಪಿ ಮಹಿಳಾ ಕಾರ್ಯಕರ್ತರ ಮೊಬೈಲ್‌ಗೆ ಕಾಂಗ್ರೆಸ್​ ಕಾರ್ಯಕರ್ತೆ ಭಾಗ್ಯ ಮೆಸೇಜ್​ ಮಾಡಿದ್ದರು. ಅಭಿಮಾನಿಗಳ ಮುಂದೆ ಮಾತ್ರ ವಿಶ್ವನಾಥ್ ಪವರ್, ಆದರೆ, ವಿಶ್ವನಾಥ್​ನಿಂದ ನೊಂದಿರುವ ಭಾಗ್ಯಳ ಮುಂದೆ ಆತನ ಪವರ್ ಆಫ್ ಆಗುತ್ತದೆ. ಪವರ್ ಇಲ್ಲದಿರುವ ವಿಶ್ವನಾಥ್, ಈ ಭೂಮಿ ಮೇಲೆ ಇರುವುದಕ್ಕೆ ನಾನೇ ಕಾರಣ ಎಂದು ಪೋಸ್ಟರ್ ಹಾಕಿ ಭಾಗ್ಯ ಮೆಸೇಜ್​ ಮಾಡಿದ್ದರು.

ಮೆಸೇಜ್ ಹಾಕಿದ ಕೂಡಲೇ ಭಾಗ್ಯ ವಿಳಾಸ ತಿಳಿದುಕೊಂಡು ಅವರ ಮನೆಯ ಬಳಿ ಬಿಜೆಪಿ ಕಾರ್ಯಕರ್ತರು ತೆರಳಿದ್ದಾರೆ. ಅನಿತಾ, ಲಕ್ಷ್ಮೀ, ವೀಣಾ, ಶಕುಂತಲಾ ಅರ್ಚನಾ ಮುಂತಾದ ಬಿಜೆಪಿ ಕಾರ್ಯಕರ್ತೆಯರು ಭಾಗ್ಯಾನ ಮೀಟ್ ಮಾಡಲು ಹೋಗಿದ್ದರು. ಈ ವೇಳೆ ನಮ್ಮ ಶಾಸಕನ ಬಗ್ಗೆ ಯಾಕೆ ಈ ರೀತಿ ಶಬ್ದ ಬಳಸ್ತಿದ್ಯಾ ಎಂದು ಕೇಳಿದ್ದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಲ್ಲದೆ, ಎರಡೂ ಪಕ್ಷದ ಕಾರ್ಯಕರ್ತೆಯರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.

ಸದ್ಯ ಈ ಘಟನೆ ಸಂಬಂಧ ಯಲಹಂಕ ಠಾಣೆಗೆ ದೂರು ನೀಡಿರುವ ಬಿಜೆಪಿ ಕಾರ್ಯಕರ್ತೆಯರು ಭಾಗ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net