ಚಾಲಕರ ಸಮವಸ್ತ್ರ ಧರಿಸಿ ಕೆಎಸ್​ಆರ್​ಟಿಸಿ ಬಸ್​ ಚಲಾಯಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

mla renukacharya jan 05 2020
Published on

ದಾವಣಗೆರೆ : ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಬೆನಕನಹಳ್ಳಿ-ಸಾಸುವೆಹಳ್ಳಿ ನೂತನ ಮಾರ್ಗದ ಕೆಎಸ್​ಆರ್​ಟಿಸಿ ಬಸ್​ ಚಲಾಯಿಸಿ ಸಾರ್ವಜನಿಕರು ಹುಬ್ಬೇರುವಂತೆ ಮಾಡಿದರು.

ಚಾಲಕರ ಸಮವಸ್ತ್ರ ಧರಿಸಿದ ಶಾಸಕ ರೇಣುಕಾಚಾರ್ಯ ಅವರು, ಬೆನಕನಹಳ್ಳಿಯಿಂದ ಬಸ್​ ಚಾಲನೆ ಆರಂಭಿಸಿದರು. ಶಾಸಕರ ಕಾರ್ಯವನ್ನು ಬೆಂಬಲಿಗರು ಶ್ಲಾಘಿಸಿದರು.

ಬೆನಕನಹಳ್ಳಿಯಿಂದ ಉಜನಿಪುರ, ಹಿರೇಬಸೂರು, ಹೊಟ್ಯಾಪುರ, ರಾಂಪುರ, ಬಳ್ಳಾಪುರ ಮಾರ್ಗವಾಗಿ ಬಸ್​ ಸಾಸುವೆಹಳ್ಳಿ ತಲುಪುತ್ತದೆ. ಪ್ರತಿ ಗ್ರಾಮ ಬಂದಾಗಲೂ ಶಾಸಕರು ಗ್ರಾಮದ ಹೆಸರನ್ನು ಹೇಳುತ್ತಿದ್ದರು.
ಮಾರ್ಗದಲ್ಲಿ ಚಲಿಸುವಾಗ ಎದುರಾದ ಸೇತುವೆ ದಾಟುವ ವೇಳೆ ಎದೆ ಢವ, ಢವ ಎನ್ನುತ್ತಿತ್ತು ಎಂದು ತಮಾಷೆ ಮಾಡಿ ಪ್ರಯಾಣಿಕರನ್ನು ನಗೆಗಡಲಲ್ಲಿ ತೇಲಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net