ಶಾಸಕ ಕೆ.ಎಂ.ಉದಯ್ ರೈತರ ಬಳಿ ಕ್ಷಮೆ ಕೇಳಲು ಒತ್ತಾಯ

oppo_2
ಶಾಸಕ ಕೆ.ಎಂ.ಉದಯ್ ಅವರು ರೈತ ಸಂಘದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆಂದು ಆರೋಪಿಸಿ ರಾಜ್ಯ ರೈತ ಸಂಘದ ಏಕೀಕರಣ ಸಮಿತಿ ವತಿಯಿಂದ ಮದ್ದೂರಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಚಂದ್ರಶೇಖರ್, ಮಂಜೇಶ್‌ಗೌಡ, ಎಚ್.ಜಿ.ಪ್ರಭುಲಿಂಗು, ಬಸವರಾಜು, ಸೊ.ಸಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ ಇದ್ದರು.
Published on

ಮದ್ದೂರು: ಶಾಸಕ ಕೆ.ಎಂ.ಉದಯ್ ಅವರು ರೈತ ಸಂಘದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆಂದು ಆರೋಪಿಸಿ ರಾಜ್ಯ ರೈತ ಸಂಘದ ಏಕೀಕರಣ ಸಮಿತಿ ವತಿಯಿಂದ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ಮಾಡಲಾಯಿತು.

ಹೆದ್ದಾರಿಗೆ ಆಗಮಿಸಿದ ರೈತ ಸಂಘದ ಕಾರ್ಯಕರ್ತರು ಶಾಸಕ ಕೆ.ಎಂ.ಉದಯ್ ಅವರು ರೈತ ಸಂಘದ ಬಗ್ಗೆ ಲಘುವಾಗಿ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆದು ಈ ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ರೈತ ಸಂಘದ ಹೋರಾಟದ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಈ ಕೂಡಲೇ ಅವರು ರೈತರ ಬಳಿ ಕ್ಷಮೆ ಕೇಳದೆ ಹೋದರೆ ಮುಂದಿನ ಅವರಿಗೆ ಸಂಬಂಧಿಸಿದ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಸಮಸ್ಯೆಗಳಿದ್ದು ಅದನ್ನು ಮೊದಲು ಸರಿಪಡಿಸಲಿ. ಅದನ್ನು ಬಿಟ್ಟು ರೈತರ ವಿರೋಧದ ನಡುವೆ ಕಾವೇರಿ ಆರತಿ ಮಾಡಲು ನಾವು ಬಿಡುವುದಿಲ್ಲ. ರೈತ ಸಂಘ ಹಾಗೂ ಸಂಘ ಸಂಸ್ಥೆಗಳ ಹೋರಾಟದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಮದ್ದೂರು ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು, ಮಳವಳ್ಳಿ ತಾಲೂಕು ಅಧ್ಯಕ್ಷ ಬಸವರಾಜು, ಮುಖಂಡರಾದ ಸೊ.ಸಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಮುಖಂಡರಾದ ಅಂದಾನಿಗೌಡ, ಕೆ.ಜಿ. ಉಮೇಶ್, ಹುರಗಲವಾಡಿ ಉಮೇಶ್, ರಾಮಕೃಷ್ಣಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net