ವಿಜಯಗಣಪತಿ ದೇವಸ್ಥಾನದ ಮರು ನಿರ್ಮಾಣ ಸಿದ್ಧತೆ ಪರಿಶೀಲಿಸಿದ ಶಾಸಕ ಚನ್ನಬಸಪ್ಪ

mla channabasappa visit raagigudda
ಶಿವಮೊಗ್ಗ ಬಂಗಾರಪ್ಪ ಬಡಾವಣೆಯಲ್ಲಿ ವಿಜಯಗಣಪತಿ ಮತ್ತು ವಾಸುಕಿ ದೇವಸ್ಥಾನದ ಉದ್ಘಾಟನಾ ಸಮಾರಂಭದ ಸಿದ್ಧತೆಗಳನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಪರಿಶೀಲಿಸಿದರು. ಎನ್.ಕೆ. ಜಗದೀಶ್, ಮೋಹನ್ ರೆಡ್ಡಿ, ಎನ್.ಜಿ.ನಾಗರಾಜ್, ಎಸ್.ಜ್ಞಾನೇಶ್ವರ್, ಧೀರರಾಜ್ ಹೊನ್ನವಿಲೆ ಇದ್ದರು.
Published on

ಶಿವಮೊಗ್ಗ: ವಿಜಯಗಣಪತಿ ಮತ್ತು ವಾಸುಕಿ ದೇವಸ್ಥಾನದ ಮರು ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ನ.2 ಮತ್ತು 3ರಂದು ನಡೆಯುವ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸಿದ್ಧತೆಗಳನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಪರಿಶೀಲಿಸಿದರು.

ಬುಧವಾರ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೆಲ ಹಿಂದು ವಿರೋಧಿ ಮನಸ್ಥಿತಿಯವರು ಗಣೇಶ ಮತ್ತು ನಾಗದೇವರ ವಿಗ್ರಹಗಳನ್ನು ಧ್ವಂಸ ಮಾಡಿದ್ದರು. ಇದರಿಂದ ಈ ಭಾಗದ ಜನರು ದೊಡ್ಡಮಟ್ಟದ ಪ್ರತಿಭಟನೆಗೂ ಸಜ್ಜಾಗಿದ್ದರು. ವಿಗ್ರಹ ಧ್ವಂಸ ಮಾಡಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಬಳಿಕ ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಗಣಪತಿ ಸಂಘದವರು ಸೇರಿ ಸುಂದರ ಮತ್ತು ಶಾಶ್ವತ ದೇವಾಲಯ ನಿರ್ಮಿಸಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಎನ್.ಜಿ.ನಾಗರಾಜ್, ಎಸ್.ಜ್ಞಾನೇಶ್ವರ್, ಧೀರರಾಜ್ ಹೊನ್ನವಿಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net