ಈ ಸರ್ಕಾರ ಒಂದು ವರ್ಷಕ್ಕೋ ಅಥವಾ…..: ಬಸನಗೌಡ ಪಾಟೀಲ್​ ಯತ್ನಾಳ್​

Untitled design - 2023-11-02T150038.835
Published on

ಬೆಂಗಳೂರು: "ಪಾಪ ಸಿದ್ದರಾಮಯ್ಯನವರ ವಿರುದ್ಧ ಅವರ ಸರ್ಕಾರದಲ್ಲೇ ನಡೆಯುತ್ತಿರುವ ಷಡ್ಯಂತ್ರವನ್ನು ನೋಡಿದರೆ ನಮಗೆ ಅಯ್ಯೋ ಅನ್ನಿಸುತ್ತಿದೆ. ಸಿದ್ದರಾಮಯ್ಯನವರು 'ಹಿಂದಿವಾಲಾ' ಸುರ್ಜೆವಾಲಾ ಅವರನ್ನು ಸಮಸ್ಯೆ ಬಗೆಹರಿಸಲು ಕರ್ನಾಟಕಕ್ಕೆ ಸ್ವಾಗತಿಸಿರುವುದು ಅವರ ಅಸಹಾಯಕತೆಯನ್ನು ತೋರುತ್ತಿದೆ. ನೆನ್ನೆ ಕಾಂಗ್ರೆಸ್ ಕಚೇರಿಯಲ್ಲಿ 3 ಗಂಟೆ ನಡೆದ ರಾಜಿ ಸಂಧಾನ ವಿಫಲವಾಗಿರುವುದರ ಹಿಂದೆ ಯಾರು ಕೊಟ್ಟಿರುವ ಉಡುಗೊರೆಗಳು ಕಾರಣ ಎಂದು ಕಾಂಗ್ರೆಸ್ ಕಚೇರಿಯ ಗೋಡೆಗಳೂ ಕೂಗುತ್ತಿವೆ" ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು.

"ಹಿಂದುಳಿದ ವರ್ಗಗಳ ನಾಯಕರಾದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಈ ರೀತಿ ನಡೆಸಿಕೊಳ್ಳುತ್ತಿರುವುದು, ಅವರ ವಿರುದ್ದ ಕಾಂಗ್ರೆಸ್ ಗುಂಪುಗಾರಿಕೆ ನೋಡಿದರೆ ಲೋಕಸಭೆಯ ನಂತರ ಕುರ್ಚಿಗೆ ಕಂಟಕವೆಂದು ತೋರುತ್ತಿದೆ. ಮೊದಲು ಇದ್ದ ಎರಡು ಗುಂಪುಗಳು ಈಗ ಐದು ಆಗಿದ್ದು, ಎಲ್ಲಾ ಗುಂಪಿನ ನಾಯಕರು ಬೇರೆ ಬೇರೆ ರಾಜ್ಯಗಳಲ್ಲಿ ರೆಸಾರ್ಟ್ ಬುಕ್ ಮಾಡಿ ಕಾಯುತ್ತಿರುವಂತಿದೆ" ಎಂದು ಹೇಳಿದರು.

"ರಾಜ್ಯದ ಜನರಿಗೆ ಇವರ ಅಗ್ರಿಮೆಂಟ್ ಎಷ್ಟು ವರ್ಷಕ್ಕೆ ಎಂದು ಕಾಂಗ್ರೆಸ್ ಪಕ್ಷ ಹಾಗು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ, ಒಂದು ವರ್ಷವೋ, 2, ನಂತರ ಯಾರು? ಈ ಮಂತ್ರಿ ಮಂಡಲ ಒಂದು 1, 2 ಅಥವಾ 3, ಈ ಸರ್ಕಾರ ಒಂದು ವರ್ಷಕ್ಕೋ, ಎರಡೋ ಅಥವಾ ಮೂರೋ" ಎಂದು ಹೇಳಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net