

ಬೆಳಗಾವಿ: ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಕರೊನಾ ಸೋಂಕು ತಗುಲಿದೆ. ಟ್ವೀಟ್ ಮಾಡಿ ತಮಗೆ ಕೊವಿಡ್-19 ಇರುವುದನ್ನು ದೃಢಪಡಿಸಿದ್ದಾರೆ.
ನಾನು ಕೊವಿಡ್-19 ತಪಾಸಣೆಗೆ ಒಳಗಾಗಿದ್ದೆ. ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ನನಗೆ ಯಾವುದೇ ಲಕ್ಷಣಗಳೂ ಇಲ್ಲ. ಹಾಗಾಗಿ ಮನೆಯಲ್ಲೇ ಐಸೋಲೇಟ್ ಆಗಿದ್ದೇನೆ. ಮನೆಯಿಂದಲೇ ನನ್ನ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತೇನೆ ಎಂದು ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ.
ಹಾಗೇ, ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ದಯವಿಟ್ಟು ಕೊವಿಡ್-19 ಟೆಸ್ಟ್ ಮಾಡಿಸಿಕೊಳ್ಳಿ ಎಂದೂ ಮನವಿ ಮಾಡಿದ್ದಾರೆ.