ನಾಪತ್ತೆಯಾಗಿದ್ದ ಎಸ್​ಪಿಒ ಜೆಇಎಂ ಉಗ್ರನಾಗಿ ಪತ್ತೆ !

arrest
Published on

ಶ್ರೀನಗರ: ಕೇಂದ್ರ ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಬಂಧಿಸಲ್ಪಟ್ಟ ಮೂವರು ಜೈಷ್ ಏ ಮೊಹಮ್ಮದ್ ಉಗ್ರರ ಪೈಕಿ ಒಬ್ಬಾತ ಈ ಹಿಂದೆ ನಾಪತ್ತೆಯಾಗಿದ್ದ ಸ್ಪೆಷಲ್ ಪೊಲೀಸ್ ಆಫೀಸರ್ (ಎಸ್​ಪಿಒ) ಎಂದು ಪೊಲೀಸರು ಭಾನುವಾರ ಹೇಳಿಕೊಂಡಿದ್ದಾರೆ.

ಎಸ್​ಪಿಒ ಕಳೆದ ಅಕ್ಟೋಬರ್​ 24ರಂದು ಎರಡು ಎಕೆ 47 ರೈಫಲ್​ಗಳೊಂದಿಗೆ ನಾಪತ್ತೆಯಾಗಿದ್ದ. ಖಚಿತ ಮಾಹಿತಿ ಆಧರಿಸಿ ಪೊಲೀಸರು ಸಿಆರ್​ಪಿಎಫ್​​ನ ಎರಡು ತುಕಡಿಗಳೊಂದಿಗೆ ಹಯಾತ್​ಪೋರಾ ಮತ್ತುಯ ಛಾದೂರಾ ಪ್ರದೇಶಗಳಲ್ಲಿ ಶೋಧ ಕಾರ್ಯ ಆರಂಭಿಸಿದ್ದರು. ಇದೇ ವೇಳೆ ಒಂದು ವಾಹನದವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು. ಆ ವಾಹನದಲ್ಲಿದ್ದರು ಸಾಕಷ್ಟು ಪ್ರತಿರೋಧ ತೋರಿದ್ದರು. ಬಳಿಕ ಅವರನ್ನು ತಂತ್ರಪೂರ್ವಕ ಬಂಧಿಸಲಾಗಿತ್ತು.

ಬಂಧಿತರನ್ನು ಉಗ್ರನಾಗಿ ಬದಲಾಗಿದ್ದ ಎಸ್​ಪಿಒ ಅಲ್ತಾಫ್ ಹುಸೇನ್​ ಆಗಿದ್ದ. ಇನ್ನುಳಿದ ಉಗ್ರರನ್ನು ಶಬೀರ್ ಅಹ್ಮದ್ ಭಟ್​, ಜಮ್​ಶೀದ್ ಮ್ಯಾಗ್ರೇ, ಝಹೀದ್ ದರ್​ ಎಂದು ಗುರುತಿಸಲಾಗಿದೆ. ಎಲ್ಲರೂ ಪುಲ್ವಾಮಾ ನಿವಾಸಿಗಳು. ಅವರ ಬಳಿ ಇದ್ದ ಸ್ಪೋಟಕ, ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಹಾಂಗೀರ್ ಎಂಬಾತನನ್ನು ಮತ್ತೆ ಇನ್ನೊಂದು ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net