ಮಗ-ಸೊಸೆ ನಡುವೆ ಮನಸ್ತಾಪ: ಮೊಮ್ಮಗನ ಪ್ರಾಣ ತೆಗೆದ ಅಜ್ಜ..

police
ಸಾಂದರ್ಭಿಕ ಚಿತ್ರ
Published on

ಗೋದಾವರಿ: ಮೊಮ್ಮಗನನ್ನು ಅಜ್ಜನೇ ಕೊಲೆ ಮಾಡಿ ಪರಾರಿಯಾಗಿರುವ ದಾರುಣ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಸಲಿಂಗಕಾಮಿ ಡೇಟಿಂಗ್ ಆ್ಯಪ್ ಜಾಲ…ಖಾಸಗಿ ವಿಡಿಯೋ ಮಾಡಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ 6 ವಿದ್ಯಾರ್ಥಿಗಳ ಬಂಧನ

ಆರೋಪಿಯನ್ನು ಪೋಕಳ ನಾಗೇಶ್ವರ ರಾವ್ ಎಂದು ಗುರುತಿಸಲಾಗಿದ್ದು, ವೆಂಕಟ ಕಲ್ಯಾಣ್ ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ. ಸತ್ಯನಾರಾಯಣ ಮತ್ತು ಸಿರಿಶಾ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಮಗ ವೆಂಕಟ ಕಲ್ಯಾಣ್ ಅತ್ತಿಲಿ ಮಂಡಲದ ಬಳ್ಳಿಪಾಡು ಖಾಸಗಿ ಕಾಲೇಜಿನಲ್ಲಿ ಎಲ್ ಕೆಜಿ ಓದುತ್ತಿದ್ದನು.

ಘಟನೆ ಹಿನ್ನೆಲೆ:

ಕಳೆದ ಬುಧವಾರದಂದು ಪೆಂಟಪಾಡು ಮಂಡಲದ ಮೀನಾ ವಲ್ಲೂರಿನಲ್ಲಿ ನಾಪತ್ತೆಯಾಗಿದ್ದ ವೆಂಕಟ ಕಲ್ಯಾಣ್ ಎಂಬ ಬಾಲಕ ಅನುಮಾನಾಸ್ಪದ ಸ್ಥಿತಿಯಲ್ಲಿ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಇತ್ತ ಮಗನ ಸುಳಿವು ಸಿಗದ ಕಾರಣ ತಾಯಿ ಸಿರಿಶಾ ಅದೇ ದಿನ ರಾತ್ರಿ ಪೆಂಟಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನೂ ಆರಂಭಿಸಿದ್ದರು.

ಈ ನಡುವೆ ಬಾಲಕನೊಬ್ಬನ ಮೃತದೇಹ ಸಿಕ್ಕಿರುವ ಬಗ್ಗೆ ಮಾಹಿತಿಯನ್ನು ಆಧರಿಸಿ, ಶುಕ್ರವಾರ ಬೆಳಗ್ಗೆ ಗಣಪವರಂ ಮಂಡಲದ ಕೊಮರ್ರು ಮುತ್ಯಾಲಮ್ಮತಳ್ಳಿ ದೇವಸ್ಥಾನದ ಬಳಿಯ ಚರಂಡಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಕೊನೆಗೆ ನಾಪತ್ತೆಯಾದ ಬಾಲಕನದ್ದೇ ಮೃತದೇಹ ಎಂದು ತಿಳಿದು ಬಂದಿದ್ದು. ಈ ವೇಳೆ ಮಗನಿಗೆ ಆಸ್ತಿ ಸಿಗಬಾರದು ಎಂಬ ಉದ್ದೇಶದಿಂದ ತನ್ನ ಮಗನನ್ನು ಪತಿ ಸತ್ಯನಾರಾಯಣನೇ ಕೊಲೆ ಮಾಡಿದ್ದಾರೆ ಎಂದು ತಾಯಿ ಸಿರಿಶಾ ಆರೋಪಿಸಿದ್ದಳು.

ಇದನ್ನೂ ಓದಿ: ಡ್ಯಾನ್ಸ್​​​ ಮಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ವಿದ್ಯಾರ್ಥಿನಿ..!

ಹತ್ತು ವರ್ಷಗಳ ಹಿಂದೆ ಮೀನವಲ್ಲೂರಿನ ಪೋಕಳ ನಾಗೇಶ್ವರ ರಾವ್​ರ ಪುತ್ರ ಸತ್ಯನಾರಾಯಣ, ಏಲೂರು ಜಿಲ್ಲೆಯ ಸಿರಿಶಾ ಎಂಬಾಕೆಯನ್ನು ವಿವಾಹವಾದ್ದರು. ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗನಿದ್ದು, ಇತ್ತೀಚೆಗಷ್ಟೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹಿರಿಯರು ರಾಜಿ ಸಂಧಾನಕ್ಕೆ ಬಂದರೂ ಪ್ರಯೋಜನವಾಗಿರಲಿಲ್ಲ. ಈ ನಡುವೆ ನಾಗೇಶ್ವರ ರಾವ್ ಇದೇ ತಿಂಗಳ 9ರಂದು ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ಮೊಮ್ಮಗನನ್ನು ಎತ್ತಿಕೊಂಡು ಹೋಗಿ ಮೀನವಲ್ಲೂರು ಉಪನಗರಕ್ಕೆ ಕರೆದೊಯ್ದು ಕೊಲೆ ಮಾಡಿ ಚರಂಡಿಗೆ ಎಸೆದು ಆರೋಪಿ ತಲೆಮರೆಸಿಕೊಂಡಿದ್ದಾನೆ. ನಾಗೇಶ್ವರ ರಾವ್ ಅವರ ಪುತ್ರ ಸತ್ಯನಾರಾಯಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net