

ಪಠಾಣ್ ಕೋಟ್: ಪಂಜಾಬ್ನ ಗುರುದಾಸ್ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಅವರು ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಅಲ್ಲಿನ ಜನರು ಪೋಸ್ಟರ್ಗಳನ್ನು ಹಾಕುತ್ತಿದ್ದಾರೆ.
ಪಠಾಣ್ಕೋಟ್ದ ರೈಲ್ವೆ ಸ್ಟೇಶನ್ ಮತ್ತು ಪಾರ್ಕ್ಗಳಲ್ಲಿ ಎಂಪಿ ಸನ್ನಿ ಡಿಯೋಲ್ ಮಿಸ್ಸಿಂಗ್ ಪೋಸ್ಟರ್ಗಳನ್ನು ಅಂಟಿಸಲಾಗಿದೆ.
ಸನ್ನಿ ಡಿಯೋಲ್ ಅವರನ್ನು ತುಂಬ ದಿನಗಳಿಂದ ನಾವು ನೋಡಲಿಲ್ಲ. ಅವರು ಕ್ಷೇತ್ರದಲ್ಲಿ ಎಲ್ಲಿಯೂ ಕಾಣುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಗುರುದಾಸ್ ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸನ್ನಿ ಡಿಯೋಲ್, ಕಾಂಗ್ರೆಸ್ನ ಸುನೀಲ್ ಝಾಕರ್ ಮತ್ತು ಆಪ್ನ ಪೀಟರ್ ಮಾಸಿಹ್ ವಿರುದ್ಧ ಗೆಲುವು ಸಾಧಿಸಿದ್ದರು.
ಸನ್ನಿ ಡಿಯೋಲ್ಗೆ ವಿವಾದ ಹೊಸದೇನಲ್ಲ.ಸಂಸದರಾಗಿ ಚುನಾಯಿತರಾದ ಅವರು ತಮ್ಮ ಗೈರಿನಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಭೆಗಳಿಗೆ ಹಾಜರಾಗಲು, ಪ್ರಮುಖ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಯೋರ್ವನನ್ನು ನೇಮಕ ಮಾಡಿಕೊಳ್ಳುವ ಮೂಲಕ ಕಾಂಟ್ರವರ್ಸಿ ಸೃಷ್ಟಿಸಿದ್ದರು. (ಏಜೆನ್ಸೀಸ್)