

ಮುಂಬೈ: ಮೂರು ತಿಂಗಳಿಗೂ ಹೆಚ್ಚು ಕಾಲ ಕಾಣೆಯಾಗಿದ್ದ ಮಾಲ್ ನಾಯಿ ಲೈಲಾ ಇದೀಗ ಮತ್ತೆ ತನ್ನ ಮನೆಗೆ ವಾಪಸ್ಸಾಗಿದೆ. ಮೇ.21 ರಂದು ಚೇತನ್ ಸಾಲ್ವಿ, ಸೂರಜ್ ಚೌಹಾಣ್ ಮತ್ತು ಪರ್ವೇಜ್ ಎಂಬ ವ್ಯಕ್ತಿಗಳು ನಾಯಿಯನ್ನು ಕರೆದೊಯ್ದಿದ್ದರು ಎಂದು ಆರೋಪಿಸಲಾಗಿದೆ. ಸ್ಯಾನ್ಪಾಡಾದಲ್ಲಿ ನಾಯಿ ಇದೆ ಎಂಬ ಸುಳಿವು ಬಂದ ನಂತರ ಪ್ರಾಣಿ ಕಾರ್ಯಕರ್ತ ಮತ್ತು ಹ್ಯುಮಾನಿಟಿ ವರ್ಲ್ಡ್ ಫೌಂಡೇಶನ್ನ ಸಂಸ್ಥಾಪಕ ಶಿರಾಜ್ ಅಹ್ಮದ್ ಶ್ವಾನಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಮೂರು ತಿಂಗಳ ಕಾಲ, ಅಹ್ಮದ್ ಮತ್ತು ಇತರ ಪ್ರಾಣಿ ಪ್ರಿಯರು ರಾತ್ರಿಯಿಡೀ ಶ್ವಾನವನ್ನು ಹುಡುಕಿದ್ದಾರೆ. ಕಾಣೆಯಾದ ಪೋಸ್ಟರ್ಗಳನ್ನು ಬಳಸಿ ಮತ್ತು 25,000 ರೂ. ಬಹುಮಾನವನ್ನು ನೀಡುವುದಾಗಿಯೂ ಘೋಷಿಸಿದ್ದರು. ಇನ್ನೂ ಲೈಲಾ ನಾಯಿ ಬೋರಿವಲಿಯ ಐಸಿ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಲೈಲಾ ಕಣ್ಮರೆಯಾದ ರಾತ್ರಿಯ ಸಿಸಿಟಿವಿ ದಾಖಲೆಗಳ ಆಧಾರದ ಮೇಲೆ, ಹ್ಯುಮಾನಿಟಿ ವರ್ಲ್ಡ್ ಫೌಂಡೇಶನ್ ಎನ್ಜಿಒದ ಸ್ಥಾಪಕ ನಿರ್ದೇಶಕರಾಗಿರುವ ಅಹ್ಮದ್, ಈ ಹಿಂದೆ ಲೈಲಾ ಅವರನ್ನು ಮಾಲ್ ಆವರಣದಿಂದ ಅಕ್ರಮವಾಗಿ ಕರೆದೊಯ್ದ ಶಂಕಿತ ಕೆಲವು ಗುತ್ತಿಗೆ ಕಾರ್ಮಿಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
(ಏಜೆನ್ಸೀಸ್)
ಲೈಲಾ ಮನೆಗೆ ಮರಳಿ ಬಂದ ಸಂಭ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಹ್ಯುಮಾನಿಟಿ ವರ್ಲ್ಡ್ ಫೌಂಡೇಶನ್ನ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಕಾಮೆಂಟ್ ಮಾಡುತ್ತಿರುವುದು ಕಂಡುಬಂದಿದೆ. ಕರಿಷ್ಮಾ ತನ್ನಾ, ಸ್ನೇಹಾ ಉಲ್ಲಾಲ್ ಅವರಂತಹ ಸೆಲೆಬ್ರಿಟಿಗಳು ಕಾಮೆಂಟ್ ಮೂಲಕ ಹರ್ಷ ವ್ಯಕ್ತ ಪಡಿಸಿದ್ದಾರೆ. ಇನ್ನೂ ಮುಂಬೈ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಸುಧೀರ್ ಕುಡಾಲ್ಕರ್ ಕೂಡ ಲೈಲಾಳನ್ನು ಹುಡುಕಿ ಮನೆಗೆ ಕರೆತಂದಿದ್ದಕ್ಕೆ ಶ್ಲಾಘಿಸಿದ್ದಾರೆ.