ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕರೊನಾ ಸೋಂಕಿತ ಮರುದಿನ ಒಳಚರಂಡಿ ಬಳಿ ಶವವಾಗಿ ಪತ್ತೆ

Dead Body
ಸಾಂದರ್ಭಿಕ ಚಿತ್ರ
Published on

ಉತ್ತರ ಪ್ರದೇಶದ ವಾರಾಣಸಿಯ ಕೊವಿಡ್​ -19 ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಸೋಂಕಿತನ ಶವ ಮರುದಿನ ಒಳಚರಂಡಿ ಬಳಿ ಪತ್ತೆಯಾಗಿದೆ.

ನಗರದ ಬಿಎಚ್​ಯು ಕೊವಿಡ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಜಯ್​​ ಭಾನುವಾರ ನಾಪತ್ತೆಯಾಗಿದ್ದ. ಆದರೆ ಮರುದಿನ ಇದೇ ಆಸ್ಪತ್ರೆಯ ಬಳಿ ಇರುವ ಒಳಚರಂಡಿ ಪೈಪ್​ ಬಳಿ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಕುಟುಂಬದವರು ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮೂತ್ರಪಿಂಡ ಕೊಯ್ಲಿಗಾಗಿ ಆಸ್ಪತ್ರೆಯವರೇ ಈತನನ್ನು ಸಾಯಿಸಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದನ್ನೂ ಓದಿ: VIDEO: ಅಂತರ್​ ಧರ್ಮೀಯ ವಿವಾಹ; ‘ಲವ್​ ಜಿಹಾದ್​ ‘ಎಂದು ಹೋರಾಟಕ್ಕಿಳಿದವರಿಗೆ ತಿರುಗೇಟು ಕೊಟ್ಟ ಯುವತಿ…

ಅಜಯ್​ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆತನ ಕುಟುಂಬದವರು, ಸಂಬಂಧಿಕರು ಗುಂಪಾಗಿ ಆಸ್ಪತ್ರೆಗೆ ಬಂದು ದೊಡ್ಡ ಗಲಾಟೆ ಮಾಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರೇ ಬರಬೇಕಾಯಿತು. ಇದೀಗ ಆಸ್ಪತ್ರೆ ವಿರುದ್ಧ ಮೃತನ ಮನೆಯವರು ಮತ್ತೊಂದು ದೂರು ದಾಖಲಿಸಿದ್ದಾರೆ.

ಅಜಯ್​ ಕಳೆದ ವಾರ ಅಪಘಾತದಲ್ಲಿ ಗಾಯವಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಕೊವಿಡ್​-19 ಸೋಂಕು ಇರುವುದು ದೃಢಪಟ್ಟಿತ್ತು. ಹಾಗಾಗಿ ಚಿಕಿತ್ಸೆ ಮುಂದುವರಿದಿತ್ತು. ನಿನ್ನೆ ಸಂಜೆಯಿಂದ ಏಕಾಏಕಿ ಕಾಣದಾಗಿದ್ದರು. ಈ ಬಗ್ಗೆ ಕುಟುಂಬದವರು ಪೊಲೀಸರಿಗೂ ತಿಳಿಸಿದ್ದರು. ಸದ್ಯ ಪೊಲಿಸರು ತನಿಖೆ ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net