ರಾಜಕೀಯ ಜೀವನಕ್ಕೆ ಪ್ರವೇಶಿಸಿದ ಮಿಸ್​ ಇಂಡಿಯಾ ಪೂಜಾ ರಮೇಶ್​…

WhatsApp Image 2023-02-06 at 8.15.29 AM
Published on

ರಾಯಚೂರು: ಇದೀಗ ನಟಿ ಪೂಜಾ ರಮೇಶ್​, ರಾಜಕೀಯ ಜೀವನಕ್ಕೆ ಅಧಿಕೃತವಾಗಿ ಬಲಗಾಲಿಟ್ಟಿದ್ದಾರೆ. ಖ್ಯಾತ ನಟಿ, ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಆಗುವುದರ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದಾರೆ.

ಪೂಜಾ ರಮೇಶ್​ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದು ಬೆಂಗಳೂರಿನಲ್ಲಿ ಆಪ್ ಸೇರಿದಂತೆ ನಟಿಯೂ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಹಿಂದೆ ಪೂಜಾ ರಮೇಶ್​, ಸ್ಪರ್ಧೆ ಮಾಡುವುದರ ಬಗ್ಗೆ ದಿಗ್ವಿಜಯ ನ್ಯೂಸ್ ಬಳಿ ಎಕ್ಸ್​ಕ್ಲೂಸಿವ್ ಆಗಿ ಹಂಚಿಕೊಂಡಿದ್ದರು.

ಮಿಸ್ ಇಂಡಿಯಾ ವಿಜೇತೆ ಕೂಡ ಆಗಿರುವ ನಟಿ ಪೂಜಾ ರಮೇಶ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮಲೆನಾಡು ಭಾಗದಿಂದ ಬಂದು ರಾಯಚೂರು ಜಿಲ್ಲೆಯಲ್ಲಿ ಕಣಕ್ಕಿಳಿಯಲಿದ್ದಾರೆ.

ಇವರು ಮಹಿಳಾ ಮತದಾರರನ್ನು ಟಾರ್ಗೆಟ್ ಮಾಡಿ ಮತ ಕೇಳಲು ಪ್ಲಾನ್ ಮಾಡಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ನ ಪ್ರಬಲ ಅಭ್ಯರ್ಥಿಗಳ ನಡುವೆ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈ ಹಿಂದೆ 2013ರ ಚುನಾವಣೆಯಲ್ಲಿ ನಟಿ ಪೂಜಾ ಗಾಂಧಿ ಇದೇ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇದೀಗ ಪೂಜಾ ರಮೇಶ್ ಪ್ರಬಲ ಅಭ್ಯರ್ಥಿಗಳ ನಡುವೆ ಗೆದ್ದು ಬೀಗುತ್ತಾರಾ ಅನ್ನುವುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net