ಹೊಟ್ಟೆ ಕಿಚ್ಚಿಗೆ ಕೊನೆಯಿಲ್ಲ; ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿದ್ದ ಟೊಮ್ಯಾಟೊ ಗಿಡಗಳನ್ನು ಬುಡಸಮೇತ ಕಿತ್ತು ಹಾಕಿದ ಕಿರಾತಕರು…

tomato criminals
Published on

ಕೋಲಾರ: ಜಗತ್ತಿನಲ್ಲಿ ಎಂತಹದ್ದೇ ರೋಗಕ್ಕೂ ಮದ್ದು ಕಂಡು ಹಿಡಿಯಬಹುದು. ಆದರೆ ಹೊಟ್ಟೆಕಿಚ್ಚಿಗೆ ಯಾವ ಮದ್ದನ್ನೂ ಕಂಡು ಹಿಡಿಯಲು ಸಾಧ್ಯವಿಲ್ಲ. ಇವರು ದ್ವೇಷದಿಂದ ಹಾಗೆ ಮಾಡಿದ್ದೋ, ಅಥವಾ ಹೊಟ್ಟೆಕಿಚ್ಚಿನಿಂದ ಹಾಗೆ ಮಾಡಿದ್ದೋ ಗೊತ್ತಿಲ್ಲ. ಆದರೆ ಲಕ್ಷ ಲಕ್ಷ ರೂ. ಹಣ ಹೂಡಿ ಬೆಳೆದಿದ್ದ ಟೊಮ್ಯಾಟೊ ಬೆಳೆ ನಾಶವಾಗಿರುವುದು ಮಾತ್ರ ಸತ್ಯ.

ಈ ಘಟನೆ ಬಂಗಾರಪೇಟೆ ತಾಲೂಕಿನ ಮಾದಮಂಗಲ ಗ್ರಾಮದಲ್ಲಿ ನಡೆದಿದೆ. ಈ ಕಿಡಿಗೇಡಿಗಳು 3 ಸಾವಿರಕ್ಕೂ ಅಧಿಕ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿದ್ದಾರೆ.

ರೈತರಾದ ವೆಂಕಟಸ್ವಾಮಿ ಎಂಬುವವರು ಕಷ್ಟಪಟ್ಟು, ಉತ್ತಮ ಬೆಲೆ ಇರುವ ಟೊಮ್ಯಾಟೊ ಬೆಳೆದಿದ್ದರು. ಇನ್ನೇನು ಫಸಲು ಕೈ ಸೇರಬೇಕು, ಮಾರುಕಟ್ಟೆಯಲ್ಲಿ ಮಾರಿ ಸಾಕಷ್ಟು ಹಣ ಗಳಿಸಬೇಕು ಎಂದು ಕನಸು ಕಂಡಿದ್ದು ವ್ಯರ್ಥವಾಗಿ ಹೋಗಿದೆ. ಅದಲ್ಲದೇ ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿದ್ದು ವ್ಯರ್ಥವಾಗಿದ್ದು, ಹಣ ಹಿಂತಿರುಗಿಸುವುದು ಹೇಗೆ ಎಂಬ ಚಿಂತೆಯಲ್ಲಿ ವೆಂಕಟಸ್ವಾಮಿ ಇದ್ದಾರೆ.

ರೈತ ವೆಂಕಟಾಸ್ವಾಮಿ ಒಟ್ಟು ಒಂದು ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದು ಅದರಲ್ಲಿ ಅರ್ಧ ಎಕರೆಯಲ್ಲಿ ಬೆಳೆದಿದ್ದ ಗಿಡಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಈ ಘಟನೆ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net