

ರಾಣೆಬೆನ್ನೂರ: ಸುಪ್ರೀಂಕೋರ್ಟ್ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಿವಿಧ ರೈತಪರ, ದಲಿತಪರ, ಕನ್ನಡಪರ ಸಂಟನೆಗಳ ವತಿಯಿಂದ ನಗರದ ಬಸ್ ನಿಲ್ದಾಣದ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ನ್ಯಾಯಮೂತಿರ್ಗಳಿಗೆ ದೇಶದಲ್ಲಿ ಮಹತ್ವದ ಸ್ಥಾನವಿದೆ. ಅಂಥವರ ಮೇಲೆ ಶೂ ಎಸೆಯುವ ಮೂಲಕ ರಾಕೇಶ ಶರ್ಮಾ ಎಂಬುವನು ಸಂವಿಧಾನಕ್ಕೆ ಅಪಮಾನ ಮಾಡಿದಂತಾಗಿದೆ. ಇಂಥವನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಧ್ಯ ಪ್ರದೇಶದಲ್ಲಿ ವಕೀಲನೊಬ್ಬ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇಂಥವರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂದ ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಹಿರಿಯ ವಕೀಲ ನಾಗರಾಜ ಕುಡಪಲಿ, ಚಂದ್ರಣ್ಣ ಬೇಡರ, ಮಲ್ಲೇಶಪ್ಪ ಮದ್ಲೇರ, ಕರಬಸಪ್ಪ ಕೂಲೇರ, ಬೀರಪ್ಪ ಲಮಾಣಿ, ಸಿದ್ದಪ್ಪ ಅಂಬಲಿ, ಪ್ರಕಾಶ ಪೂಜಾರ, ಆನಂದ ಹುಲಬನ್ನಿ, ಬಸವರಾಜ ತಳವಾರ, ಕೆ.ಆರ್. ಉಮೇಶ, ಶ್ರೀಧರ ಪೂಜಾರ ಹಾಗೂ ವಿವಿಧ ಸಂಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.