

ನವದೆಹಲಿ: ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 49 ಕೆಜಿ ತೂಕ ವಿಭಾಗದಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದಾರೆ. ಒಟ್ಟು 199 ಕೆಜಿ ಭಾರ ಎತ್ತಿ ನಾಲ್ಕನೇ ಸ್ಥಾನ ಪಡೆದರು.
2 ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಮೊದಲ ವೇಟ್‌ಲಿಫ್ಟರ್ ಎಂಬ ದಾಖಲೆಯನ್ನು ಅವರು ಸ್ವಲ್ಪದರಲ್ಲೇ ಕಳೆದುಕೊಂಡರು. ಚೀನಾದ ಹೌ ಝಿಹುಯಿ ಒಲಿಂಪಿಕ್ ದಾಖಲೆಯೊಂದಿಗೆ ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದರು.
ಭಾರತಕ್ಕೆ ಶೂಟಿಂಗ್ನಲ್ಲಿ 3 ಪದಕಗಳು ಬಂದ ಮೇಲೆ ಮತ್ತೆ ಯಾವ ಸ್ಪರ್ಧೆಯಲ್ಲೂ ಪದಕಗಳು ಬಂದಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಪದಕ ಕೇವಲ ಒಂದೇ ಒಂದು 1ಕೆ.ಜಿಯಲ್ಲಿ ಕೈತಪ್ಪಿದೆ. ಸದ್ಯ ಭಾರತ ಪದಕಗಳ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದೆ.
ಚಾನು ತನ್ನ ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ ಸುಲಭವಾಗಿ 85 ಕೆಜಿ ಎತ್ತಿದರು. ಇದಾದ ನಂತರ ಆಕೆ ತನ್ನ ಎರಡನೇ ಪ್ರಯತ್ನದಲ್ಲಿ 88 ಕೆಜಿ ಎತ್ತುವಲ್ಲಿ ವಿಫಲಳಾದಳು. ಮೂರನೇ ಸ್ನ್ಯಾಚ್ ಪ್ರಯತ್ನದಲ್ಲಿ 88 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಅವರು 111 ಕೆಜಿಯಲ್ಲಿ ತಮ್ಮ ಮೊದಲ ವಿಫಲ ಪ್ರಯತ್ನ ಮಾಡಿದರು. ಇದಾದ ಬಳಿಕ ಎರಡನೇ ಪ್ರಯತ್ನದಲ್ಲಿ 111 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು. ತನ್ನ ಕೊನೆಯ ಪ್ರಯತ್ನದಲ್ಲಿ 114 ಕೆಜಿ ಎತ್ತುವಲ್ಲಿ ವಿಫಲಳಾದಳು.
ಝಿಹುಯಿ ಒಟ್ಟು 206 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರು. ಪದಕಕ್ಕಾಗಿ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟ ಝಿಹುಯಿ ಕ್ಲೀನ್ ಮತ್ತು ಜರ್ಕ್‌ನಲ್ಲಿ 117 ಕೆಜಿ ಎತ್ತುವ ಮೂಲಕ ಹೊಸ ಒಲಿಂಪಿಕ್ ದಾಖಲೆಯನ್ನು ಸ್ಥಾಪಿಸಿದರು. ರೊಮೇನಿಯಾದ ಮಿಹೇಲಾ ಕ್ಯಾಂಬೆ ಒಟ್ಟು 205 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು. ಈ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ನ ಸುರೋದ್ಚನಾ ಖಂಬಾವೊ ಅವರು 199 ಕೆ.ಜಿ ಭಾರ ಎತ್ತುವ ಮೂಲಕ ಕಂಚು ಗೆದ್ದರು. ಅವರು ಚಾನು ಅವರಿಂದ ಕಡಿಮೆ ಅಂತರದಿಂದ ಗೆದ್ದರು.
ವೇಟ್ ಲಿಫ್ಟರ್ ಸ್ಪರ್ಧೆಯಲ್ಲಿ ಚೀನಾದ Z.H ಹೌ ಅವರು 206 ಕೆ.ಜಿ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ದ್ವಿತಿಯ ಸ್ಥಾನದಲ್ಲಿ ರೊಮಾನಿಯಾದ ಎಂ.ವಿ. ಕ್ಯಾಂಬೆ ಅವರು 205 ಕೆ.ಜಿ ಎತ್ತುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡರು. 3ನೇ ಸ್ಥಾನದಲ್ಲಿ ಥೈಲ್ಯಾಂಡ್ನ ಎಸ್. ಖಾಂಬೊ 200 ಕೆ.ಜಿ ಎತ್ತುವುದರಿಂದ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಆದರೆ ಭಾರತದ ಮೀರಾಬಾಯಿ ಚಾನು 199 ಕೆ.ಜಿ ಭಾರ ಎತ್ತುವ ಮೂಲಕ ಕೇವಲ ಒಂದೇ ಒಂದು ಕೆ.ಜಿಯಿಂದ ಪದಕ ಮಿಸ್ ಮಾಡಿಕೊಂಡಿದ್ದಾರೆ.
ಚಾನು ಅವರ ವೃತ್ತಿಜೀವನವು ಯಶಸ್ಸಿನಿಂದ ತುಂಬಿತ್ತು. 2017 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ತೂಕ ವಿಭಾಗದಲ್ಲಿ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇದರ ಹೊರತಾಗಿ ಅವರು 2022 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ (49 ಕೆಜಿ) ಗೆದ್ದರು. ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 2 ಚಿನ್ನ (2018, 2022) ಮತ್ತು 1 ಬೆಳ್ಳಿ ಪದಕ (2014) ಗೆದ್ದಿದ್ದಾರೆ. ಇವುಗಳ ಹೊರತಾಗಿ, ಅವರು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ (2020) ಕಂಚಿನ ಪದಕವನ್ನು ಗೆದ್ದಿದ್ದಾರೆ.