ಪೋಷಕರ ಗದರಿಕೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಅಕ್ಕ-ತಂಗಿ..! Parents

Parents
Published on

Parents: ಮನೆಯಲ್ಲಿ ಪೋಷಕರಿಂದ ಕಿರುಕುಳಕ್ಕೊಳಗಾಗಿ ಇಬ್ಬರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನ ಬಾಲಾಪುರದ ಶನಿವಾರ (ಜೂ.21) ನಡೆದಿದೆ.

17 ಮತ್ತು 15 ವರ್ಷ ವಯಸ್ಸಿನ ಮೃತರು ಆಂಧ್ರಪ್ರದೇಶದ ನೆಲ್ಲೂರು ಮೂಲದವರಾಗಿದ್ದು , ಸುಮಾರು ಒಂದು ತಿಂಗಳ ಹಿಂದೆ ತಮ್ಮ ಪೋಷಕರೊಂದಿಗೆ ನಗರಕ್ಕೆ ವಲಸೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಅಕ್ಕ ಇತ್ತೀಚೆಗೆ ಅದೇ ನೆರೆಹೊರೆಯ ಯುವಕನನ್ನು ಮದುವೆಯಾಗುವೆ ಎಂದು ಪಾಲಕರಿಗೆ ತಿಳಿಸಿದ್ದಳು, ಆದರೆ ಅವಳು ಇನ್ನೂ ಅಪ್ರಾಪ್ತಳಾಗಿದ್ದರಿಂದ ಸ್ವಲ್ಪ ಸಮಯ ಕಾಯುವಂತೆ ಆಕೆಯ ಪೋಷಕರು ಸಲಹೆ ನೀಡಿದ್ದರು. ಇದಾದ ನಂತರ, ಇಬ್ಬರೂ ಹುಡುಗಿಯರು ತಮ್ಮ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಪೋಷಕರು ಅವರ ಅಸಭ್ಯ ವರ್ತನೆಗೆ ಅವರನ್ನು ಗದರಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆಯಲ್ಲಿ ಇತ್ತೀಚೆಗೆ ನಡೆದ ಈ ರೀತಿಯ ಜಗಳದಿಂದಾಗಿ ಬೇಸತ್ತ ಅಪ್ರಾಪ್ತ ಬಾಲಕಿಯರು ಮಧ್ಯಾಹ್ನದ ವೇಳೆ ಮನೆಯ ಕಬ್ಬಿಣದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸಂಜೆ ಕೆಲಸದಿಂದ ಹಿಂತಿರುಗಿದ ಅವರ ಪೋಷಕರು ಇಬ್ಬರೂ ಮೃತಪಟ್ಟಿರುವುದು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಬಾಲಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net