ಇಬ್ಬರು ಹೆಂಡಿರ ಗಂಡನಿಂದ ಅಪ್ರಾಪ್ತ‌ ಮಗಳ ಮೇಲೇ ಅತ್ಯಾಚಾರ, ಆರೋಪಿಯ ಬಂಧನ

CHN
Published on

ಚಾಮರಾಜನಗರ: ಇಲ್ಲಿನ ಗಾಳಿಪುರ ಬಡವಾಣೆಯಲ್ಲಿ ಅಪ್ರಾಪ್ತ‌ ಮಗಳ ಮೇಲೆ ತಂದೆಯೇ ಅತ್ಯಾಚಾರಗೈದಿರುವ ಹೀನ‌ ಕೃತ್ಯ ನಡೆದಿದೆ. ಮಹಮ್ಮದ್ ಮುಸ್ತಾಫಾ (30) ಅತ್ಯಾಚಾರವೆಸಗಿದ ತಂದೆ. ಮಹಮ್ಮದ್ ಮುಸ್ತಾಫಾಗೆ ಇಬ್ಬರು ಹೆಂಡತಿಯರು. ಜನವರಿ 31ರಂದು ಎರಡನೇ ಹೆಂಡತಿ ಬೆಂಗಳೂರಿಗೆ ಹೋಗುವಾಗ ತನ್ನ ಮಕ್ಕಳನ್ನ ಗಂಡನ ಮೊದಲನೇ ಹೆಂಡತಿಯ ಬಳಿ ಬಿಟ್ಟು ಹೋಗಿದ್ದಳು.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಮ್ಮದ್ ಮುಸ್ತಾಫಾ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಎರಡನೇ ಹೆಂಡತಿಯಿಂದಲೇ ಗಂಡನ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಮೊಹಮ್ಮದ್ ಮುಸ್ತಫಾನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net