ಹುಡುಗನೊಂದಿಗೆ ಫೋನ್​ನಲ್ಲಿ ಮಾತನಾಡಿದ ಅಪ್ರಾಪ್ತೆಗೆ ಕುಟುಂಬದ ಸದಸ್ಯರು ಈ ರೀತಿ ಮಾಡಿದ್ದು ಸರಿನಾ?

Minor girl
Published on

ಅಲಿರಾಜ್​ಪುರ್​: ಹುಡುಗನೊಂದಿಗೆ ಮೊಬೈಲ್​ನಲ್ಲಿ ಮಾತನಾಡಿದಳೆಂಬ ಸಂಶಯದಿಂದ ತನ್ನ ಕುಟುಂಬದ ನಾಲ್ವರು ಸದಸ್ಯರಿಂದಲೇ ಅಪ್ರಾಪ್ತ ಬಾಲಕಿ ಥಳಿತಕ್ಕೊಳಗಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಅಪ್ರಾಪ್ತೆಯನ್ನು ಸಾರ್ವಜನಿಕವಾಗಿ ಥಳಿಸಿದ್ದಲ್ಲದೆ ಆಕೆಯ ಜಡೆಯನ್ನು ತುಂಡರಿಸಿದ್ದಾರೆ. ಇದನ್ನು ಮೂಕ ಪ್ರೇಕ್ಷಕರಾಗೇ ನೋಡುತ್ತಾ ನಿಂತಿದ್ದ ಸಾರ್ವಜನಿಕರಲ್ಲಿ ಯಾರೊಬ್ಬರು ಆಕೆಯನ್ನು ಕಾಪಾಡಲು ಮುಂದೆ ಬರದೇ ಇದ್ದುದ್ದು ದುರಾದೃಷ್ಟವೇ ಸರಿ.

ಜನರು ನಾಚಿಕೆ ಪಡುವಂತಹ ಘಟನೆ ನಡೆದಿರುವುದು ಮಧ್ಯಪ್ರದೇಶದ ಅಲಿರಾಜ್​ಪುರದ ಸೊಂದ್ವಾ ಏರಿಯಾದಲ್ಲಿ. ಇದೇ ವೇಳೆಯಲ್ಲಿ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉಪವಲಯ ಪೊಲೀಸ್​ ಅಧಿಕಾರಿ ಧೀರಜ್​ ಬಾಬ್ಬರ್​, ಎಫ್​ಐಆರ್​ ದಾಖಲಿಸಲಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹೊತ್ತಿಸಿದ್ದು, ಅನೇಕರು ಇದೊಂದು ಅಸಹ್ಯಕರ ಎಂದು ಜರಿದಿದ್ದಾರೆ. ಇದಲ್ಲದೆ ಅನೇಕರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net