ಒಂದೇ ರೂಮಿನಲ್ಲಿ ಬಾಲಕರಿಬ್ಬರ ಜತೆ ಲೈಂಗಿಕ ಕ್ರಿಯೆ! ಬಂಧಿತ ಮಹಿಳೆ ಕೊಟ್ಟ ವಿಚಿತ್ರ ಕಾರಣ ಹೀಗಿದೆ…

US Woman
Published on

ನ್ಯೂಯಾರ್ಕ್​: ಹದಿಹರೆಯದ ಹುಡುಗರಿಬ್ಬರ ಜತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಅಮೆರಿಕದ ಮಿನ್ನೆಸೋಟ ರಾಜ್ಯದ 38 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ತನ್ನ ಕುಟುಂಬದ ಜತೆ ಹೋಟೆಲ್​ ಒಂದರಲ್ಲಿ ತಂಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.

15 ವರ್ಷ ವಯಸ್ಸಿನ ಹುಡುಗರಿಬ್ಬರು ಹಾಕಿ ಪಂದ್ಯಳಿಗಾಗಿ ಪಟ್ಟಣದಲ್ಲಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಜನವರಿ 14ರಂದು ಮಹಿಳೆಯ ಆಲಿಸನ್ ಲೀ ಸ್ಕಾರ್ಡಿನ್ ಹೋಟೆಲ್‌ನ ಹಾಟ್​ಟಬ್ ಪ್ರದೇಶದಲ್ಲಿ ಹದಿಹರೆಯದವರೊಂದಿಗೆ ಸಂಭಾಷಣೆಯಲ್ಲಿ ತೊಡಗುವ ಮೂಲಕ ಅವರನ್ನು ಮಹಿಳೆ ತನ್ನ ಕಾಮದ ಬಲೆಯಲ್ಲಿ ಬೀಳಿಸಲು ಆರಂಭಿಸಿದರು.

ಅದೇ ದಿನ ಸಂಜೆ ಆ ಮಹಿಳೆ Snapchat ಮೂಲಕ ಇಬ್ಬರಲ್ಲಿ ಒಬ್ಬ ಹುಡುಗನನ್ನು ಸಂಪರ್ಕಿಸಿ, ತನ್ನ ವೈವಾಹಿಕ ಜೀನದಲ್ಲಿರುವ ತೊಂದರೆಗಳ ಬಗ್ಗೆ ಮತ್ತು ಗಂಡನ ಜತೆ ಜಗಳ ಆಡಿದ್ದಾಗಿ ತಿಳಿಸಿದಳು. ಅಲ್ಲದೆ, ಹುಡುಗ ಉಳಿದಿದ್ದ ಹೋಟೆಲ್ ಕೋಣೆಗೆ ಭೇಟಿ ನೀವುದಾಗಿ ಮನವಿ ಮಾಡಿಕೊಂಡಳು.

ಹೋಟೆಲ್​ ರೂಮಿಗೆ ಹೋದ ಮಹಿಳೆ ಇಬ್ಬರು ಹುಡುಗರೊಂದಿಗೆ ಹಾಸಿಗೆ ಏರಿ, ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಮೊದಲು ಸೆಕ್ಸ್ ಬಗ್ಗೆ ಚರ್ಚಿಸಿದ್ದಾರೆಂದು ಹೇಳಲಾಗುತ್ತದೆ. ಹುಡುಗರ ಹಾಕಿ ಪಂದ್ಯವೊಂದರಲ್ಲಿ ಮಹಿಳೆ ಕಾಣಿಸಿಕೊಂಡಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತು. ಅಲ್ಲದೆ, ಆಕೆ ಕೊಲೊರಾಡೋಗೆ ಹಿಂದಿರುಗಿದ ನಂತರವೂ ಹುಡುಗರನ್ನು ಸಂಪರ್ಕಿಸುವುದನ್ನು ಮುಂದುವರೆಸಿದಳು.

ಗುರುವಾರ ಆಕೆಯ ಬಂಧನದ ಬಳಿಕ ಮೂರನೇ ಮತ್ತು ನಾಲ್ಕನೇ ಹಂತದ ಕ್ರಿಮಿನಲ್ ಲೈಂಗಿಕ ನಡವಳಿಕೆಗೆ ಸಂಬಂಧಿಸಿದ ಆರೋಪಗಳನ್ನು ಹೊರಿಸಲಾಗಿದೆ. ತನಿಖೆಯ ಸಮಯದಲ್ಲಿ, ಆಕೆ ಹದಿಹರೆಯದವರೊಂದಿಗೆ ಚುಂಬನ ಮತ್ತು ಲೈಂಗಿಕ ಸಂಪರ್ಕದಲ್ಲಿ ತೊಡಗಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಗಂಡನ ಜತೆ ಜಗಳ ಆಡಿದ ಕೋಪದಿಂದ ಈ ರೀತಿ ಮಾಡಿದೆ ಎಂದು ಹೇಳಿದ್ದಾಳೆ. ಆರೋಪಿ ಮಹಿಳೆಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net