

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 4ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಒಟ್ಟು ಹುದ್ದೆ 67
ಹುದ್ದೆಯ ವಿವರ
ಯಂಗ್ ಪ್ರೊಫೆಶನಲ್ಸ್ 20
ಅಸೋಸಿಯೇಟ್ 12
ಕನ್ಸಲ್ಟೆಂಟ್ 21
ಸೀನಿಯರ್ ಕನ್ಸಲ್ಟೆಂಟ್ 14
ವಿದ್ಯಾರ್ಹತೆ
ಅಭ್ಯರ್ಥಿಯು ಹುದ್ದೆಗಳಿಗೆ ಅನುಗುಣವಾಗಿ ಬಿಇ/ಬಿ.ಟೆಕ್/ಎಂಸಿಎ/ಡೇಟಾ ಸೈನ್ಸ್/ ಡೇಟಾ ಅನಾಲಿಟಿಕ್ಸ್/ಕಂಪ್ಯೂಟೇಷನಲ್ ಮ್ಯಾಥಮೆಟಿಕ್ಸ್, ಅರ್ಥಶಾಸ್ತ್ರ, ಪಬ್ಲಿಕ್ ಪಾಲಿಸಿಯಲ್ಲಿ ಸ್ನಾತಕೋತ್ತರ ಪದವಿ, ಎಲ್‌ಎಲ್‌ಎಂ, ಎಂಬಿಎ ಅಥವಾ ತತ್ಸಮಾನ ಪದವಿ ಪೂರ್ಣಗೊಳಿಸಿರಬೇಕು. ಡೇಟಾ ಸೈನ್ಸ್ ಸ್ಟ್ರೀಮ್ ಅಡಿಯಲ್ಲಿ, ಅಭ್ಯರ್ಥಿಯು ಡೇಟಾಸೈನ್ಸ್/ಐಟಿಯಲ್ಲಿ ಅನುಭವವನ್ನು ಹೊಂದಿರಬೇಕು. ಯಂಗ್ ಪ್ರೊಫೆಶನಲ್ಸ್ ಹುದ್ದೆಗೆ 1 ವರ್ಷ, ಅಸೋಸಿಯೇಟ್ ಹುದ್ದೆಗೆ 3 ವರ್ಷ, ಕನ್ಸಲ್ಟೆಂಟ್ ಹುದ್ದೆಗೆ 8 ವರ್ಷ, ಸೀನಿಯರ್ ಕನ್ಸಲ್ಟೆಂಟ್ ಹುದ್ದೆಗೆ 15 ವರ್ಷ ಅನುಭವ ಹೊಂದಿರಬೇಕು.
ವಯೋಮಿತಿ
ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 35 ರಿಂದ ಗರಿಷ್ಠ 65 ವರ್ಷದೊಳಗಿರಬೇಕು. ಸರ್ಕಾರಿ ನಿಯಮಾನುಸಾರ ವಯೋಮಿತಿ ಸಡಿಲಿಕೆಗಳು ಅನ್ವಯವಾಗಲಿವೆ.
ವೇತನ
ಯಂಗ್ ಪ್ರೊಫೆಶನಲ್ಸ್ 60,000
ಅಸೋಸಿಯೇಟ್ 80,000-1,45,000
ಕನ್ಸಲ್ಟೆಂಟ್ 1,45,000-2,65,000
ಸೀನಿಯರ್ ಕನ್ಸಲ್ಟೆಂಟ್ 2,65,000-3,30,000
ಆಯ್ಕೆ ಪ್ರಕ್ರಿಯೆ
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾನದಂಡದ ಪ್ರಕಾರ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಅರ್ಜಿ ಸಲ್ಲಿಕೆ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತವಾಗಿ ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು, ಸ್ವಯಂ-ದೃಢೀಕರಿಸಿದ ಪ್ರತಿ, ಅಗತ್ಯ ದಾಖಲೆಗಳನ್ನು recruitment-e2@gov.in. ಗೆ ಮೇಲ್ ಮಾಡಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನ: 04-10- 2023
ಹೆಚ್ಚಿನ ಮಾಹಿತಿಗಾಗಿ: https://commerce.gov.in/