

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲೂಕು ತಹಸೀಲ್ದರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಕ್ಷಿತ್‌ನನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ಬುಧವಾರ ಕಂದಾಯ ಸಚಿವ ಕೃಷ್ಣಬೈರೇಗೌಡ, ಪೂರ್ವ ತಾಲೂಕಿನ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಹಾಜರಾತಿ ಪರಿಶೀಲನೆ ನಡೆಸಿದರು.
ಈ ವೇಳೆ ರಕ್ಷಿತ್, ಹಾಜರಾತಿಯಲ್ಲಿ ಸಹಿ ಮಾಡದೆ ಇರುವುದು ಕಂಡುಬಂದಿದೆ. ಕಚೇರಿಗೆ ಗೈರು ಆಗಿದ್ದರೂ ಕಚೇರಿಯಲ್ಲಿ ಇರುವುದಾಗಿ ದೂರುವಾಣಿ ಕರೆಯಲ್ಲಿ ಉತ್ತರಿಸಿದ್ದಾರೆ.
ಸರ್ಕಾರಿ ನೌಕರರು ಅಸಭ್ಯ ವರ್ತನೆ ಮತ್ತು ಕಚೇರಿ ಕೆಲಸದಲ್ಲಿ ನಿರ್ಲಕ್ಷತೆ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರಕ್ಷಿತ್ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.