ಕೊಳಲು ವಾದಕನ ಸಂಕಷ್ಟಕ್ಕೆ ಮಿಡಿದ ಸಚಿವ; ವೈಯಕ್ತಿಕ ಧನ ಸಹಾಯ !

Minister Tangadagi help
Published on

ಬೆಂಗಳೂರು: ಕರೊನಾ ಬಳಿಕ ಅವಕಾಶವಿಲ್ಲದೆ ಅತಂತ್ರವಾಗಿದ್ದ ಬೆಂಗಳೂರು ಮೂಲದ ಕೊಳಲು ವಾದಕ ವೆಂಟರಮಣಯ್ಯ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವೈಯಕ್ತಿಕ ಆರ್ಥಿಕ ನೆರವು ನೀಡಿದ್ದಾರೆ.

ವಿವಾಹ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೊಳಲು ನುಡಿಸಿ ಜೀವನ ಸಾಗಿಸುತ್ತಿದ್ದರು. ಆದರೆ ಕರೊನಾ ಸಾಂಕ್ರಾಮಿಕ ಪಿಡುಗಿನ ನಂತರದ ಆದಾಯ ಮೂಲವೇ ಇಲ್ಲದಂತಾಗಿ ಜೀವನ ಸಂಕಷ್ಟದ ತಿರುಗುಣಿ ಮಡುವಿಗೆ ಸಿಲುಕಿತ್ತು. ವೆಂಕಟರಮಣಯ್ಯ ಅವರ ಇಬ್ಬರು ಪುತ್ರರಲ್ಲಿ ಒಬ್ಬ ಹತ್ತನೇ ತರಗತಿ, ಮತ್ತೊಬ್ಬ ಪುತ್ರ ಗ್ರಾಫಿಕ್ ಡಿಸೈನ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು.

ಈ ಕೋರ್ಸ್‌ಗೆ ಬೇಕಾದ ಒಂದು ಲಕ್ಷ ರೂ. ಶುಲ್ಕವನ್ನು ಹೊಂದಿಸಲು ಮನೆ, ಮನೆಗಳ ಮುಂದೆ ಕೊಳಲು ನುಡಿಸಿ ಹಣ ಸಂಗ್ರಹಿಸುತ್ತಿದ್ದರು. ವಿಷಯ ತಿಳಿದ ಶಿವರಾಜ ತಂಗಡಗಿಯವರು ಕಲಾವಿದನಿಗೆ ಮಂಗಳವಾರ ಭೇಟಿಯಾಗಿ ಕೊಳಲು ವಾದಕನ ಪುತ್ರನ ವಿದ್ಯಾಭ್ಯಾಸಕ್ಕೆ ಇಲಾಖೆಯಿಂದ ನೆರವು ನೀಡಲು ಸಾಧ್ಯವಿಲ್ಲವೆಂದು ತಿಳಿಸಿ, ವೈಯಕ್ತಿಕವಾಗಿ ಹಣಕಾಸಿನ ಸಹಾಯ ಮಾಡಿದರು.

ಇಲಾಖೆಯ ಕಾರ್ಯಕ್ರಮಗಳಲ್ಲಿ ಕಲಾವಿದನಿಗೆ ಹೆಚ್ಚು ಅವಕಾಶ ನೀಡಿ, ಆರ್ಥಿಕ ಸಹಾಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಲಾವಿದರು, ನೊಂದವರು ಹಾಗೂ ಸಂಕಷ್ಟಕ್ಕೆ ಸಿಲುಕಿದವರ ಪರವಾಗಿ ನಮ್ಮ ಸರ್ಕಾರ ಇರಲಿದೆ ಎಂದು ತಂಗಡಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net